ಶಿರಸಿ : ಬಾವಿಯಲ್ಲಿ ಬಿದ್ದ ತಮ್ಮನನ್ನು ಉಳಿಸಲು ಹೋಗಿ ಅಣ್ಣನೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ತಾಲೂಕಿನ ಬಂಕನಾಳ ಕ್ರಾಸ್ ಬಳಿ ನಡೆದಿದೆ.
ಬಾವಿಗೆ ಬಿದ್ದ ತಮ್ಮನನ್ನು ಕಾಪಾಡಲೋದ ಅಣ್ಣ ಈಜು ಬಾರದೆ ಸಾವು... ತಮ್ಮ ಬದುಕಿದ್ದೇಗೆ ಗೊತ್ತಾ? - ಜಿಮ್ಮು ಕಾನು ಗೌಳಿ (19) ಮೃತಪಟ್ಟ ಯುವಕ
ಬಾವಿಯಲ್ಲಿ ಬಿದ್ದ ತಮ್ಮನನ್ನು ಉಳಿಸಲು ಬಾವಿಗೆ ಹಾರಿದ ಸಹೋದರನಿಗೆ ಈಜು ಬಾರದೇ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಶಿರಸಿ ತಾಲೂಕಿನ ಬಂಕನಾಳ ಕ್ರಾಸ್ ಬಳಿ ನಡೆದಿದೆ.
ತಮ್ಮನನ್ನು ರಕ್ಷಿಸಲು ಮುಂದಾದ ಅಣ್ಣನಿಗೆ ಎದುರಾಯ್ತು ಮೃತ್ಯು
ಜಿಮ್ಮು ಕಾನು ಗೌಳಿ (19) ಮೃತಪಟ್ಟ ಯುವಕ. ಈತನ ತಮ್ಮ ಬಾಬು ಗೌಳಿ (7) ಎಂಬ ಬಾಲಕ ಮನೆ ಬಳಿಯ ಬಾವಿಯ ಬಳಿ ಹೋಗಿದ್ದಾನೆ.ಈ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದಾನೆ. ತಕ್ಷಣ ಎಚ್ಚೆತ್ತ ಅಣ್ಣ ತನ್ನ ತಮ್ಮನನ್ನು ಕಾಪಾಡಲು ಬಾವಿಗೆ ಹಾರಿದನಾದರೂ ಈಜು ಬಾರದೆ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ವಿಚಿತ್ರವೆಂದರೆ ತಮ್ಮ ಬಾಬು ಬಾವಿಯೊಳಗೆ ಗಿಡ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾನೆ. ತಕ್ಷಣ ಜನರು ಸೇರಿ ಬಾಬುವನ್ನು ಮೇಲೆತ್ತಿ ರಕ್ಷಿಸಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.