ಕರ್ನಾಟಕ

karnataka

ETV Bharat / state

ಕಾರವಾರ: ಸಮುದ್ರದಲೆಗೆ ಸಿಲುಕಿ ಪ್ರಾಣ ಕಳೆದುಕೊಂಡ ಪ್ರವಾಸಿಗ - ಈಟಿವಿ ಭಾರತ ಕನ್ನಡ

ಬೆಂಗಳೂರು ಮೂಲದ ಖಾಸಗಿ ಕಂಪನಿ ಉದ್ಯೋಗಿಯೋರ್ವ ಗೋಕರ್ಣದ ಮುಖ್ಯ ಕಡಲತೀರದ ರುದ್ರಪಾದ ಬಳಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

death-by-sea-wave-in-gokarna-beach
ಪ್ರವಾಸಕ್ಕೆ ಬಂದು ಅಲೆಗೆ ಸಿಕ್ಕಿ ಪ್ರಾಣ ಬಿಟ್ಟ ಟೂರಿಸ್ಟ್​

By

Published : Oct 30, 2022, 11:14 AM IST

Updated : Oct 30, 2022, 12:39 PM IST

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿ, ಅಲೆಗಳಿಗೆ ಸಿಲುಕಿ ಪ್ರವಾಸಿಗನೋರ್ವ ಸಾವನ್ನಪ್ಪಿರುವ ಘಟನೆ ಗೋಕರ್ಣದ ಮುಖ್ಯ ಕಡಲತೀರದ ರುದ್ರಪಾದ ಬಳಿ ಶನಿವಾರ ನಡೆದಿದೆ. ಬೆಂಗಳೂರು ಮೂಲದ ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದ ಅಭಿಷೇಕ್ (29) ಮೃತಪಟ್ಟಿರುವ ವ್ಯಕ್ತಿ. ನಾಲ್ವರು ಸ್ನೇಹಿತರೊಂದಿಗೆ ಇವರು ಪ್ರವಾಸಕ್ಕೆ ಆಗಮಿಸಿದ್ದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಮುಂದಾದರೂ ಆ ವೇಳೆಗಾಗಲೇ ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದರು. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ದೀಪಾವಳಿಗೆ ಸಾಲು ಸಾಲು ರಜೆ.. ಮುರುಡೇಶ್ವರದಲ್ಲಿ ಎಂಜಾಯ್​ ಮಾಡಿದ ಪ್ರವಾಸಿಗರು

Last Updated : Oct 30, 2022, 12:39 PM IST

ABOUT THE AUTHOR

...view details