ಕರ್ನಾಟಕ

karnataka

ETV Bharat / state

ಭಟ್ಕಳ: ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ - ವ್ಯಕ್ತಿ ಆತ್ಮಹತ್ಯೆ

ಭಟ್ಕಳ ತಾಲೂಕಿನ ಮುರ್ಡೇಶ್ವರದ ವಸತಿ ಗೃಹವೊಂದರಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

Bhatkal
ಮಾರುತಿ ಗಣಪತಿ ನಾಯ್ಕ

By

Published : Jan 10, 2021, 9:55 AM IST

ಭಟ್ಕಳ:ವಸತಿ ಗೃಹವೊಂದರಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ.

ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುರ್ಡೇಶ್ವರದ ಹಿರೇದೋಮಿ ನಿವಾಸಿ ಮಾರುತಿ ಗಣಪತಿ ನಾಯ್ಕ (34) ಮೃತ ವ್ಯಕ್ತಿ. ಇವರು ಮುರ್ಡೇಶ್ವರದಲ್ಲಿ ವಸತಿ ಗೃಹವೊಂದನ್ನು ಲೀಸ್‌ಗೆ ಪಡೆದು ನಡೆಸುತ್ತಿದ್ದರು. ಅದೇ ವಸತಿ ಗೃಹದಲ್ಲಿಯೇ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂಂ ‌ಬಾಯ್​ ಕೊಠಡಿಯನ್ನು ಸ್ವಚ್ಛಗೊಳಿಸಲು ಬಾಗಿಲು ಬಡಿದಾಗ ಬಾಗಿಲು ತೆಗೆಯದ ಕಾರಣ, ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಮೃತನ ಅಣ್ಣ ಸುಬ್ರಾಯ ಗಣಪತಿ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಎಸ್​ಐ ಎಂ.ಎಂ. ಶೇಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details