ಕಾರವಾರ: ಸಾಮಾನ್ಯವಾಗಿ ಜಾತ್ರೆಗಳಲ್ಲಿ ರಥೋತ್ಸವದ ವೇಳೆ ಇಷ್ಟಾರ್ಥ ಸಿದ್ಧಿಗಾಗಿ ರಥಗಳಿಗೆ ಬಾಳೆಹಣ್ಣು ಎಸೆಯುವುದು ವಾಡಿಕೆ. ಹೀಗೆ ಎಸೆದರೇ ಬೇಡಿಕೊಂಡಿರುವ ವರ ಫಲಿಸುತ್ತದೆ ಎಂಬುದು ಅನೇಕ ಭಕ್ತರ ನಂಬಿಕೆ ಕೂಡ. ಆದರೆ ದಕ್ಷಿಣ ಕಾಶಿ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ನಡೆದ ರಥೋತ್ಸವದಲ್ಲಿ ಕೆಲವರು ಬಾಳೆಹಣ್ಣಿನಲ್ಲಿ ಬರೆದ ವಿಚಿತ್ರ ಬರಹ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಗೋಕರ್ಣದ ಮಹಾಬಲೇಶ್ವರನಿಗೆ ವಿಚಿತ್ರ ರೀತಿಯಲ್ಲಿ ಬೇಡಿಕೆ ಇಟ್ಟ ಭಕ್ತರು...! - mahabaleshwar Temple fair In Karwar
ದಕ್ಷಿಣ ಕಾಶಿ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ನಡೆದ ರಥೋತ್ಸವದಲ್ಲಿ ಕೆಲವರು ಬಾಳೆಹಣ್ಣಿನಲ್ಲಿ ಬರೆದ ವಿಚಿತ್ರ ಬರಹ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಮಹಾಬಲೇಶ್ವರನಿಗೆ ವಿಚಿತ್ರ ರಿತಿಯಲ್ಲಿ ಬೇಡಿಕೆ ಇಟ್ಟ ಭಕ್ತರು
ಬಹುತೇಕ ಭಕ್ತರು ಕೈ ಮುಗಿದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರೇ, ಕೆಲವರು ಬಾಳೆಹಣ್ಣು, ದುಡ್ಡನ್ನು ರಥಕ್ಕೆ ಎಸೆದು ಕೈ ಮುಗಿದಿದ್ದಾರೆ. ಆದರೆ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಬಾಳೆಹಣ್ಞಿನ ಮೇಲೆ 'ಈ ಸಲನಾದ್ರು ಮದುವೆ ಮಾಡಿಸು ದೇವರೇ' ಎಂದು ಬರೆದಿದ್ದರೆ, ಮತ್ತೋರ್ವ 'ನನ್ನ ಹುಡುಗಿ ನನಗೆ ಸಿಗಲಿ' ಎಂದು 'ಒಂದು ದಿನವಾದ್ರು ಒಸಿ ತಾಗಲಿ, ದುಡ್ಡು ಇಲ್ಲ ದೇವರೇ' ಎಂಬ ಸಂದೇಶಗಳನ್ನು ಬರೆದು ಬಾಳೆಹಣ್ಣನ್ನು ಎಸೆದಿದ್ದರು. ಇದನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.