ಕಾರವಾರ: ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಕಡಲನಗರಿಯ ಜನರು ಮಾಘ ಚೌತಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಗಣೇಶ ಚತುರ್ಥಿಯ ಸಮಯದಲ್ಲಿ ನಾನಾ ಕಾರಣಗಳಿಂದ ವಿಗ್ರಹ ಪ್ರತಿಷ್ಠಾಪಿಸಲು ಸಾಧ್ಯವಾಗದಿರುವವರು ಮಾಘ ಚೌತಿಯಂದು ಗಣಪತಿಗೆ ಪೂಜೆ ಮಾಡುತ್ತಾರೆ.

ಓದಿ:ಹೊಟ್ಟೆ ಕರಗಿಸಲು ಕೆಎಸ್ಆರ್ಪಿ ಪೊಲೀಸರಿಗೆ ಏ.30ರ ಡೆಡ್ ಲೈನ್ ..!
ಗಣಪತಿ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಾರವಾರ, ಗೋವಾ ಗಡಿಯಾಗಿರುವುದರಿಂದ ಮಹಾರಾಷ್ಟ್ರ ಸಂಸ್ಕೃತಿ ಇಲ್ಲಿಗೂ ಎರವಲಾಗಿದೆ. ಹಾಗೆಯೇ, ಈ ದಿನದಂದು ಗಣಪತಿ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಸಲ್ಲಿಸಿದರೆ ಶಾಂತಿ -ನೆಮ್ಮದಿ ದೊರೆತು ಒಳ್ಳೆಯದಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಈ ನಿಟ್ಟಿನಲ್ಲಿ ಹಲವರು ಹರಕೆಯನ್ನು ಸಹ ಕಟ್ಟಿಕೊಂಡು ಗಣಪತಿಯನ್ನು ಇಟ್ಟು ಪೂಜೆ ಸಲ್ಲಿಸಿ ರಾತ್ರಿ ನಿಮಜ್ಜನ ಮಾಡುತ್ತಾರೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.