ಕಾರವಾರ :ಹವಾಮಾನ ವೈಪರೀತ್ಯದಿಂದಾಗಿ ಲಕ್ಷದ್ವೀಪದಲ್ಲಿ ಅಳವಡಿಸಿದ್ದ ಸಾಗರ ಹವಾಮಾನ ಸಂಶೋಧನಾ ಯಂತ್ರವೊಂದು ಕಣ್ಮರೆಯಾಗಿತ್ತು. ಕೊನೆಗೂ ಅದು ಸುಮಾರು ಏಳುನೂರು ಕಿ.ಮೀ ದೂರದಲ್ಲಿ ಮೀನುಗಾರರಿಗೆ ಪತ್ತೆಯಾಗಿದೆ.
ಲಕ್ಷದ್ವೀಪದಲ್ಲಿ ಅಳವಡಿಸಲಾಗಿದ್ದ ಸಾಗರ ಹವಾಮಾನದ ಮುನ್ಸೂಚನೆ ಸೇರಿ ಇತರೆ ವರದಿಗಳನ್ನು ನೀಡುವ ದೇಶದ ಅತ್ಯಾಧುನಿಕ ಯಂತ್ರ ಹವಾಮಾನ ವೈಪರೀತ್ಯದಿಂದಾಗಿ ಅಕ್ಟೋಬರ್ 3ರಂದು ಕಳಚಿಕೊಂಡು ಕಣ್ಮರೆಯಾಗಿತ್ತು. ಅದು ಕೇರಳದಲ್ಲಿ ಅ. 5ರಂದು ಕಾಣಿಸಿಕೊಂಡಿತ್ತಾದರೂ ಯಾರೊಬ್ಬರನ್ನು ಹಿಡಿದಿಟ್ಟುಕೊಂಡಿರಲಿಲ್ಲ.
ಆದರೆ, ಈ ಬಗ್ಗೆ ಮೀನುಗಾರರಿಗೆ ಯಂತ್ರದ ಫೋಟೋ ಹಾಗೂ ಅದರ ಆಕಾರದ ಬಗ್ಗೆ ಮಾಹಿತಿ ನೀಡಿ ಎಲ್ಲಾದರೂ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಕೋರಲಾಗಿತ್ತು. ಅದರಂತೆ ಯಂತ್ರವೂ ಮಹಾರಾಷ್ಟ್ರದ ಬಳಿ ಜಿಲ್ಲೆಯ ಮೀನುಗಾರರಿಗೆ ಕಾಣಿಸಿಕೊಂಡಿದೆ.