ಕರ್ನಾಟಕ

karnataka

ETV Bharat / state

ದೊಡ್ಮನೆ ಘಟ್ಟದಲ್ಲಿ ಸಿಲುಕಿದ ಲಾರಿ; ಪ್ರಯಾಣಿಕರ ಪರದಾಟ! - ಸಿದ್ದಾಪುರ-ಕುಮಟಾ ರಸ್ತೆಯ ದೊಡ್ಮನೆ ಘಟ್ಟದಲ್ಲಿ ಸಿಲುಕಿದ ಲಾರಿ

ದೊಡ್ಮನೆ ಘಟ್ಟದಲ್ಲಿ ಅವೈಜ್ಞಾನಿಕ ತಿರುವುಗಳ ರಚನೆ ಬೃಹತ್ ವಾಹನ ಸವಾರರಿಗೆ ಕಂಠಕವಾಗಿ ಪರಿಣಮಿಸಿದೆ. ಇಂಸು ಲಾರಿಯೊಂದು ತಿರುವಿನಲ್ಲಿ ಸಿಲುಕಿಕೊಂಡ ಪರಿಣಾಮ ಪ್ರಯಾಣಿಕರು ಪರದಾಡುವಂತಾಯ್ತು.

Lorry stuck
ಲಾರಿ

By

Published : Nov 9, 2020, 6:43 PM IST

ಕಾರವಾರ:ಸಿದ್ದಾಪುರ-ಕುಮಟಾ ರಸ್ತೆಯ ದೊಡ್ಮನೆ ಘಟ್ಟದಲ್ಲಿ ಲಾರಿಯೊಂದು ಸಿಕ್ಕಿಕೊಂಡ ಪರಿಣಾಮ ಬಸ್ ಸೇರಿದಂತೆ ಬೃಹತ್ ವಾಹನಗಳು ಸಂಚಾರಿಸಲಾಗದೇ ಪ್ರಯಾಣಿಕರು ಪರದಾಡುವಂತಾಗಿತ್ತು.

ಸಿದ್ದಾಪುರದಿಂದ ಆಗಮಿಸಿದ್ದ ಸಿಮೆಂಟ್ ಲಾರಿಯೊಂದು ದೊಡ್ಮನೆ ಘಟ್ಟದ ಆರಂಭದಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಸಿದ್ದಾಪುರ ಹಾಗೂ ಕುಮಟಾದಿಂದ ತೆರಳುವ ಬಸ್ ಹಾಗೂ ಇತರೆ ವಾಹನಗಳು ಸಂಚರಿಸಲಾಗದೆ ಸಂಜೆವರೆಗೂ ಪ್ರಯಾಣಿಕರು ಪರದಾಟ ನಡೆಸುವಂತಾಗಿತ್ತು. ಬಳಿಕ ಕ್ರೇನ್ ಮೂಲಕ ವಾಹನವನ್ನು ತೆರವುಗೊಳಿಸಿದ್ದು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಇನ್ನು ಲಾರಿ ಸಿಲುಕಿಕೊಂಡಿದ್ದ ಪ್ರದೇಶದಲ್ಲಿ ಭಾರಿ ಕಂದಕವಿದ್ದು, ಸ್ವಲ್ಪ ಎಚ್ಚರ ತಪ್ಪಿದ್ದರು ದೊಡ್ಡ ಅನಾಹುತ ಸಂಭವಿಸುತ್ತಿತ್ತು. ದೊಡ್ಮನೆ ಘಟ್ಟದಲ್ಲಿ ರಸ್ತೆ ದುರಸ್ಥಿಗೊಂಡು ಹಲವು ವರ್ಷಗಳ ಕಳೆದಿದ್ದು ಇಲ್ಲಿನ ಅವೈಜ್ಞಾನಿಕ ತಿರುವುಗಳು ಬೃಹತ್ ವಾಹನ ಸವಾರರಿಗೆ ಕಂಠಕವಾಗಿವೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲದೆ ಅದೆಷ್ಟೋ ಬೃಹತ್ ವಾಹನ ಸವಾರರು ಈ ಮಾರ್ಗದಲ್ಲಿ ಆಗಮಿಸುತ್ತಿದ್ದು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಿ ಅವೈಜ್ಞಾನಿಕ ತಿರುವನ್ನು ಸರಿಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details