ಕಾರವಾರ:ಕೆಟ್ಟು ನಿಂತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಲಾರಿ ಗುದ್ದಿದ ಪರಿಣಾಮ ನಾಲ್ಕು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಮಟ ತಾಲೂಕಿನ ಬರ್ಗಿಯಲ್ಲಿ ನಡೆದಿದೆ.
ಕೆಟ್ಟು ನಿಂತಿದ್ದ ಬಸ್ಗೆ ಗುದ್ದಿದ ಲಾರಿ: ನಾಲ್ವರು ಆಶಾ ಕಾರ್ಯಕರ್ತೆಯರಿಗೆ ಗಂಭೀರ ಗಾಯ - ನಾಲ್ವರು ಆಶಾ ಕಾರ್ಯಕರ್ತೆಯರು ಗಾಯ
ಕೆಟ್ಟು ನಿಂತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಲಾರಿ ಗುದ್ದಿದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಮಟ ತಾಲೂಕಿನ ಬರ್ಗಿಯಲ್ಲಿ ನಡೆದಿದೆ.

ಕೆಟ್ಟು ನಿಂತ ಬಸ್ ಗೆ ಗುದ್ದಿದ ಲಾರಿ, ನಾಲ್ವರು ಆಶಾ ಕಾರ್ಯಕರ್ತೆಯರಿಗೆ ಗಂಭೀರ ಗಾಯ
ಬಸ್ ಕೆಟ್ಟು ನಿಂತ ಕಾರಣ ಇನ್ನೊಂದು ಬಸ್ಗಾಗಿ ಕಾಯುತ್ತಿದ್ದಾಗ ಅಂಕೋಲಾ ಕಡೆಯಿಂದ ಯಮನಂತೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸಿದ್ದಾಪುರ ಮೂಲದ ಈ ನಾಲ್ವರು ಆಶಾ ಕಾರ್ಯಕರ್ತೆಯರು ಗಾಯಗೊಂಡಿದ್ದಾರೆ. ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಅಪಘಾತದ ತೀವ್ರತೆಗೆ ಲಾರಿ ಹೊಂಡಕ್ಕೆ ಉರುಳಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.