ಭಟ್ಕಳ :ನಗರದಲ್ಲಿ ಖುದ್ದು ರಸ್ತೆಗೆ ಇಳಿದ ಉಪವಿಭಾಗಾಧಿಕಾರಿ ಭರತ್ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ, ನಿನ್ನೆ ಮತ್ತು ಇಂದು ಇಲ್ಲಿನ ಹಳೆ ಬಸ್ ನಿಲ್ದಾಣದ ಸಮೀಪ ಹಾಗೂ ತಾಲೂಕಿನ ವಿವಿಧ ರಸ್ತೆಗಿಳಿದ 45ಕ್ಕೂ ಅಧಿಕ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಲಾಕ್‌ಡೌನ್ ಉಲ್ಲಂಘನೆಗೆ ಮುಂದುವರೆದ ದಂಡನೆ.... 45 ಕ್ಕೂ ಅಧಿಕ ದ್ವಿಚಕ್ರ ವಾಹನಗಳ ಜಪ್ತಿ - ಉಪವಿಭಾಗಾಧಿಕಾರಿ ಭರತ್ ಡಿವೈಎಸ್‌ಪಿ ಗೌತಮ
ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಗಿಳಿಯುವ ಯುವಕರ ಉಪಟಳ ತಡೆಯುವ ನಿಟ್ಟಿನಲ್ಲಿ ಭಟ್ಕಳದ ಉಪವಿಭಾಗಾಧಿಕಾರಿ ಭರತ್, ಡಿವೈಎಸ್‌ಪಿ ಗೌತಮ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಾಹನ ಜಪ್ತಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ಲಾಕ್‌ಡೌನ್ ಉಲ್ಲಂಘನೆ...45 ಕ್ಕೂ ಅಧಿಕ ದ್ವಿಚಕ್ರ ವಾಹನಗಳ ಜಪ್ತಿ
ಇಲ್ಲಿನ ಸಂಶುದ್ದೀನ್ ಸರ್ಕಲ್ ಸೇರಿದಂತೆ ಪಟ್ಟಣ ವ್ಯಾಪ್ತಿಯ ಪ್ರಮುಖ ಕಡೆಗಳಲ್ಲಿ ಭರತ್, ಡಿವೈಎಸ್‌ಪಿ ಗೌತಮ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಾಹನ ಜಪ್ತಿ ಕಾರ್ಯಾಚರಣೆ ನಡೆಸಿದ್ದು, ಲಾಕ್‌ಡೌನ್ ಉಲ್ಲಂಘನೆ ಮಾಡಿದ 45ಕ್ಕೂ ಅಧಿಕ ವಾಹನ ಚಾಲಕರ ಮೇಲೆ ಪೊಲೀಸರು ದೂರು ದಾಖಲಿಸಿಕೊಳ್ಳಲಾಗಿದೆ.
ಅಲ್ಲದೇ, ವಾಹನ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಲಾಕ್‌ಡೌನ್ ಅವಧಿ ಮುಗಿದ ಬಳಿಕ ಏಪ್ರಿಲ್ 16 ರಂದು ವಾಹನಗಳನ್ನು ಮರಳಿಸುವುದಾಗಿ ತಿಳಿಸಿದ್ದಾರೆ.