ಕರ್ನಾಟಕ

karnataka

ETV Bharat / state

ಲಾಕ್​ಡೌನ್ ಎಫೆಕ್ಟ್​: ನಷ್ಟದಲ್ಲಿ ಮುಳುಗಿದ ಮುದ್ರಣಾಲಯಗಳು! - ಮುದ್ರಣಾಲಯಗಳು

ಜನವರಿಯಿಂದ ಹಿಡಿದು ಜುಲೈ ತನಕ ಸಾಕಷ್ಟು ಶುಭ ಸಮಾರಂಭ ಕಾರ್ಯಗಳಿಗೆ ಪೂರ್ವ ನಿಯೋಜಿತವಾಗಿ ಮುದ್ರಣಾಲಯದವರು ಆಹ್ವಾನ ಪತ್ರಿಕೆ ಸಿದ್ಧಪಡಿಸಿಟ್ಟಿದ್ದರು. ಆದರೆ ಕೊರೊನಾ ವೈರಸ್ ಆರಂಭಗೊಂಡ ನಂತರ ಲಾಕ್​ಡೌನ ಆದೇಶದಂತೆ ಎಲ್ಲಾ ಮುದ್ರಣಾಲಯ ಬಂದ್ ಮಾಡಲಾಗಿತ್ತು. ಇದರಿಂದ ಲಕ್ಷಾಂತರ ರೂಪಾಯಿಯ ಆಹ್ವಾನ ಪತ್ರಿಕೆಗಳು ಹಾಗೆಯೇ ಉಳಿದಿದ್ದು, ಮುದ್ರಕರಿಗೆ ತೀವ್ರ ನಷ್ಟವಾಗಿದೆ.

Lockdown Effect: Millions of copies are wasted in printing presses
ಲಾಕ್​ಡೌನ್ ಎಫೆಕ್ಟ್​: ಮುದ್ರಾಣಾಲಯಗಳಲ್ಲಿ ಧೂಳು ಹಿಡಿಯುತ್ತಿವೆ ಲಕ್ಷಾಂತರ ಮೌಲ್ಯದ ಪ್ರತಿಗಳು

By

Published : May 4, 2020, 9:34 PM IST

ಭಟ್ಕಳ: ಕೊರೊನಾದಿಂದಾಗಿ ಅನೇಕ ಸಣ್ಣಪುಟ್ಟ ಉದ್ಯಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಇದು ವಿವಾಹ ಹಾಗೂ ಕೆಲ ಶುಭ ಕಾರ್ಯಗಳ ಸಮಯವಾಗಿರುವುದರಿಂದ ಕೆಲವು ವಿವಾಹಗಳು ಸರಳವಾಗಿ ನಡೆದರೆ, ಇನ್ನೂ ಕೆಲವು ಮುಂದಕ್ಕೆ ಹೋಗಿವೆ.

ಆದರೆ ಈ ಶುಭ ಕಾರ್ಯಗಳನ್ನೇ ನಂಬಿ ಬದುಕುತ್ತಿದ್ದ ಪ್ರಿಂಟಿಂಗ್​​ ಪ್ರೆಸ್​​​ಗಳ ನೌಕರರು ಹಾಗೂ ಮಾಲೀಕರು ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಷ್ಟೇ ಅಲ್ಲದೆ ವಿವಾಹ ಸಮಾರಂಭ ಸೇರಿ ಅನೇಕ ಶುಭ ಕಾರ್ಯಗಳಿಗೆ ಮುದ್ರಿಸಿದ್ದ ಆಹ್ವಾನ ಪತ್ರಿಕೆಗಳು ಕಚೇರಿಗಳಲ್ಲಿ ಧೂಳು ಹಿಡಿಯುತ್ತಿವೆ.

ತಾಲೂಕಿನ ಮುದ್ರಣಾಲಯಗಳು ಬಂದ್ ಆಗಿದ್ದು, ಈಗಾಗಲೇ ಸಾಕಷ್ಟು ಮುಂಗಡ ಕಾರ್ಯಕ್ರಮಗಳಿಗೆ ತಯಾರಿಸಿದ ಆಹ್ವಾನ ಪತ್ರಿಕೆಗಳ ಪ್ರತಿಗಳು ನಿರುಪಯುಕ್ತವಾಗಿವೆ. ಇದರಿಂದ ಮುದ್ರಣಾಲಯ ಮಾಲೀಕರ ಜೊತೆಗೆ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜನವರಿಯಿಂದ ಹಿಡಿದು ಜುಲೈತನಕ ಸಾಕಷ್ಟು ಶುಭ ಸಮಾರಂಭಗಳಿಗೆ ಪೂರ್ವ ನಿಯೋಜಿತವಾಗಿ ದಿನಾಂಕ ಗೊತ್ತುಪಡಿಸಿ ಆಹ್ವಾನ ಪತ್ರಿಕೆ ಸಿದ್ಧಪಡಿಸಲು ತಿಳಿಸಿ ಅದರಂತೆ ಮುದ್ರಣಾಲಯದವರು ಆಹ್ವಾನ ಪತ್ರಿಕೆ ಸಿದ್ಧಪಡಿಸಿಟ್ಟಿದ್ದರು. ಆದರೆ ಸಿದ್ಧಪಡಿಸಿದ ಬಳಿಕ ಕೊರೊನಾ ವೈರಸ್ ಆರಂಭಗೊಂಡ ನಂತರ ಲಾಕ್​ಡೌನ ಆದೇಶದಂತೆ ಎಲ್ಲಾ ಮುದ್ರಣಾಲಯ ಬಂದ್ ಮಾಡಲಾಗಿತ್ತು.

ಇದರಿಂದ ಮೊದಲನೇಯದಾಗಿ ಆಹ್ವಾನ ಪತ್ರಿಕೆ, ನಂತರ ರಶೀದಿ, ಡೊನೇಷನ್, ಹಣ ಸ್ವೀಕೃತಿ ಹೀಗೆ ಎಲ್ಲಾ ಕಾರ್ಯಗಳಿಗೂ ಮುದ್ರಣಾಲಯದ ಅವಶ್ಯಕತೆ ಮೊದಲೇ ಬರುತ್ತದೆ. ಮುದ್ರಣಾಲಯಗಳನ್ನು ಆರಂಭಿಸಲು ಸಾಕಷ್ಟು ಬಂಡವಾಳ ಹಾಕಿದ್ದು, ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಕಾರಣ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

ತಾಲೂಕಿನಲ್ಲಿ 20ಕ್ಕೂ ಅಧಿಕ ಮುದ್ರಣಾಲಯಗಳಿದ್ದು, ಲಾಕ್‍ಡೌನ್ ಘೋಷಣೆಯಿಂದ ಪ್ರಿಂಟಿಂಗ್‍ನ ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿವೆ. ಅಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಆಹ್ವಾನ ಪತ್ರಿಕೆಗಳು ಮುದ್ರಣಾಲಯದಲ್ಲೇ ಉಳಿದಿವೆ.

ಲಾಕ್​​ಡೌನನಿಂದಾಗಿ ಮುದ್ರಣಕ್ಕೆ ನೀಡಿದ ಜನರು ಆಹ್ವಾನ ಪತ್ರಿಕೆಗಳನ್ನು ತೆಗೆದುಕೊಂಡು ಹೋಗಿಲ್ಲ. ಜೊತೆಗೆ ನಿಗದಿತ ಕಾರ್ಯಕ್ರಮಗಳೂ ಸಹ ರದ್ದುಗೊಂಡಿದ್ದು, ಮುಂದಿನ ದಿನಗಳಲ್ಲಿ ಅದನ್ನು ತೆಗೆದುಕೊಂಡು ಹೋಗುತ್ತಾರೋ ಇಲ್ಲವೋ ಎಂಬ ಅನುಮಾನ ಹುಟ್ಟಿದೆ.

ದಿನಾಂಕವನ್ನಾದರೂ ಬದಲಿಸಿ ಕೋಡೋಣ ಎಂದರೆ ಮುಂದಿನ ದಿನಗಳಲ್ಲಿ ಸಾವಿರಾರು ಪತ್ರಿಕೆಗಳನ್ನು ಕೊಂಡು ಹಂಚುವುದೇ ಅನುಮಾನ. ಅದಕ್ಕೆ ಆಡಳಿತವೂ ಪರವಾನಗಿ ನೀಡುವುದಿಲ್ಲ ಎನ್ನುವ ಚಿಂತೆ ಮುದ್ರಣಾಲಯದ ಮಾಲೀಕರನ್ನು ಕಾಡಲಾರಂಭಿಸಿದೆ.

ಸರ್ಕಾರ ಮುದ್ರಣಾಲಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ತಾಲೂಕಿನ ಮುದ್ರಣಾಲಯದವರು ಮನವಿ ಮಾಡಿದ್ದಾರೆ. ಕೊರೊನಾದಿಂದಾಗಿ ಮುದ್ರಣಾಲಯಗಳು ಕೂಡ ಭಾರಿ ಪ್ರಮಾಣದ ಸಂಕಷ್ಟ ಎದುರಿಸುತ್ತಿವೆ. ಅಲ್ಲಿ ಕೆಲಸ ಮಾಡುವ ನೂರಾರು ಸಿಬ್ಬಂದಿ ಉದ್ಯೋಗವಿಲ್ಲದೆ ಮನೆ ನಿರ್ವಹಣೆ ಕಷ್ಟವಾಗಿದೆ. ಮುದ್ರಣಾಲಯಗಳಿಗೂ ಸರ್ಕಾರವೇನಾದರೂ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಲಕ್ಷಾಂತರ ಬಂಡವಾಳ ಹಾಕಿ ತಂದಿರುವ ಮಷಿನ್​ಗಳು ಕೆಲಸವಿಲ್ಲದೆ ಸುಮ್ಮನೆ ನಿಂತು ಹೋಗಿವೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವರಾಗಿರುವ ಶಿವರಾಮ ಹೆಬ್ಬಾರ ಅವರಿಗೆ ಮನವಿ ನೀಡಲಾಗಿದೆ ಎಂದು ಪ್ರಸ್ಕೆನ್​ ಪ್ರಿಂಟಿಂಗ್​ ಪ್ರೆಸ್​​ನ ಮಾಲೀಕ ರಾಮಚಂದ್ರ ಕಿಣಿ ಹೇಳಿದ್ದಾರೆ.

ABOUT THE AUTHOR

...view details