ಕಾರವಾರ:ಕಂಟೇನರ್ ಲಾರಿಯಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದಾಗ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿ, ಚಾಲಕ ಸಹಿತ ಅಕ್ರಮ ಮದ್ಯ ವಶಕ್ಕೆ ಪಡೆದಿರುವ ಘಟನೆ ಜೋಯಿಡಾ ತಾಲೂಕಿನ ಅನಮೋಡ ಚೆಕ್ ಪೋಸ್ಟ್ ಬಳಿ ನಡೆದಿದೆ.
ಅನಮೋಡ ಚೆಕ್ ಪೋಸ್ಟ್ನಲ್ಲಿ 432 ಲೀಟರ್ ಗೋವಾ ಮದ್ಯ ಸಾಗಾಟ: ಆರೋಪಿ ವಶಕ್ಕೆ
ಗೋವಾದಿಂದ ಆಗಮಿಸಿದ್ದ ಕಂಟೇನರ್ ಲಾರಿಯಲ್ಲಿ ಅಡಗಿಸಿಟ್ಟಿದ್ದ ಬರೊಬ್ಬರಿ 432 ಲೀಟರ್ ಗೋವಾ ಬಿಯರ್ ಬಾಟಲಿಗಳನ್ನು ಅನಮೋಡ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮದ್ಯ ವಶ
ಗೋವಾದಿಂದ ಆಗಮಿಸಿದ್ದ ಕಂಟೇನರ್ ಲಾರಿಯಲ್ಲಿ ಅಡಗಿಸಿಟ್ಟಿದ್ದ ಬರೊಬ್ಬರಿ 432 ಲೀಟರ್ ಗೋವಾ ಬಿಯರ್ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಚಾಲಕ ರಾಜಸ್ಥಾನ ಮೂಲದ ರೋಷನ್ ಸಿಂಗ್ ಎಂಬುವನನ್ನು ಬಂಧಿಸಲಾಗಿದೆ.
ಈ ಬಗ್ಗೆ ಅನಮೋಡ್ ಅಬಕಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.