ಕರ್ನಾಟಕ

karnataka

ETV Bharat / state

ಕುಮಟಾದಲ್ಲಿ ಮನೆಗೆ ಅಪ್ಪಳಿಸಿದ ಸಿಡಿಲು: ಸಂಪೂರ್ಣ ಹಾನಿ, ಅದೃಷ್ಟವಶಾತ್ ಮನೆಯವರು ಪಾರು - ಮನೆಗೆ ಸಿಡಿಲು ಬಡಿತ

ಮನೆಗೆ ಸಿಡಿಲು ಬಡಿದು (lightning strikes) ಸಂಪೂರ್ಣವಾಗಿ ಹಾನಿಗೊಳಗಾಗಿರುವ ಘಟನೆ ಕುಮಟಾ ತಾಲೂಕಿನಲ್ಲಿ ನಡೆದಿದೆ.

lightning-strikes-on-home-in-kumta
ಕುಮಟಾದಲ್ಲಿ ಮನೆಗೆ ಅಪ್ಪಳಿಸಿದ ಸಿಡಿಲು

By

Published : Nov 15, 2021, 7:40 AM IST

ಕಾರವಾರ:ಸಿಡಿಲು ಬಡಿದು (Lightning strikes) ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ (Kumata) ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಸಿಡಿಲಿನಿಂದ ಹಾನಿ

ಉತ್ತರಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಗುಡುಗು ಸಿಡಿಲು ಸಹಿತ ಭಾರಿ (heavy rain in uttar kannada) ಮಳೆಯಾಗಿದೆ. ಕುಮಟಾದಲ್ಲಿ ಕೂಡ ನಿನ್ನೆ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿತ್ತು. ಸಂಜೆ ಹೊತ್ತಿಗೆ ವರುಣನ ಆರ್ಭಟ ಮತ್ತಷ್ಟು ಜೋರಾಗಿದ್ದು, ಯಲವಳ್ಳಿಯ ನಾಗರಾಜ ಮಡಿವಾಳ ಅವರ ಮನೆಗೆ ಸಿಡಿಲು ಬಡಿದು (lightning) ಸಂಪೂರ್ಣ ಹಾನಿಗೊಳಗಾಗಿದೆ.

ವಸ್ತುಗಳಿಗೆ ಹಾನಿ

ಮನೆಯ ಹಂಚುಗಳು (Lightning strikes on home) ಸಂಪೂರ್ಣ ನೆಲಕ್ಕುರುಳಿದ್ದು, ಟಿವಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಕುಟುಂಬಸ್ಥರು ಸಿಡಿಲು ಅಪ್ಪಳಿಸುವ ವೇಳೆಗೆ ಬೇರೆ ಕಡೆ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ವಿವಾಹಿತ ಅಪ್ರಾಪ್ತೆ ಮೇಲೆ ಆರು ತಿಂಗಳಲ್ಲಿ 400 ಮಂದಿಯಿಂದ ಅತ್ಯಾಚಾರ ಆರೋಪ : ಮೂವರ ಬಂಧನ

ABOUT THE AUTHOR

...view details