ಕರ್ನಾಟಕ

karnataka

ETV Bharat / state

ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಿಸಿದ ಲೈಫ್​ಗಾರ್ಡ್​ ಸಿಬ್ಬಂದಿ

ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ಲೈಫ್ ಗಾರ್ಡ್​ಗಳೂ ತಕ್ಷಣವೇ ಬೋಟ್​ನಲ್ಲಿ ತೆರಳಿ ಮೂವರು ಯುವಕರನ್ನು ರಕ್ಷಣೆ ಮಾಡಿದ್ದಾರೆ. ಲೈಫ್​ ಗಾರ್ಡ್​ಗಳ ಸಮಯ ಪ್ರಜ್ಞೆಯಿಂದ ಮೂವರು ಬದುಕುಳಿದಿದ್ದಾರೆ. ಲೈಫ್​ ಗಾರ್ಡ್​ಗಳ ಸಾಹಸಕ್ಕೆ ಪ್ರವಾಸಿಗರು ಮೆಚ್ಚುಗೆ ಸೂಚಿಸಿದ್ದಾರೆ.

murudeshwara
ಲೈಫ್​ಗಾರ್ಡ್​ ಸಿಬ್ಬಂದಿ

By

Published : Feb 16, 2022, 7:45 PM IST

Updated : Feb 16, 2022, 8:08 PM IST

ಭಟ್ಕಳ(ಉತ್ತರ ಕನ್ನಡ):ಮುರುಡೇಶ್ವರ ಪ್ರವಾಸಕ್ಕೆ ಬಂದ ಮೂವರು ಯುವಕರು ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ವೇಳೆ ಅಲ್ಲಿನ ಲೈಫ್ ಗಾರ್ಡ್​ಗಳು ಬೋಟ್ ಮೂಲಕ ತೆರಳಿ ಮೂವರು ಯುವಕರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.

ಮಾರುತಿ, ಅನಿಲ್​​ಕುಮಾರ್​ ಹಾಗೂ ಪುರುಷೋತ್ತಮ್​ ಬಚಾವಾದ ಯುವಕರು. ಶಿವಮೊಗ್ಗ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಇವರು, ಮುರುಡೇಶ್ವರಕ್ಕೆ ಕಾಲೇಜಿನ 16 ಜನರ ತಂಡದೊಂದಿಗೆ ಪ್ರವಾಸ ಕೈಗೊಂಡಿದ್ದಾರೆ. ಶಿವನ ದರ್ಶನದ ಬಳಿಕ ಸಮುದ್ರಕ್ಕಿಳಿದ್ದಾರೆ. ಈ ವೇಳೆ, ಮೂವರು ಯುವಕರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಿಸಿದ ಲೈಫ್​ಗಾರ್ಡ್​ ಸಿಬ್ಬಂದಿ

ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ಲೈಫ್ ಗಾರ್ಡ್​ಗಳೂ ತಕ್ಷಣವೇ ಬೋಟ್​ನಲ್ಲಿ ತೆರಳಿ ಮೂವರು ಯುವಕರನ್ನು ರಕ್ಷಣೆ ಮಾಡಿದ್ದಾರೆ. ಲೈಫ್​ ಗಾರ್ಡ್​ಗಳ ಸಮಯ ಪ್ರಜ್ಞೆಯಿಂದ ಮೂವರು ಬದುಕುಳಿದಿದ್ದಾರೆ. ಲೈಫ್​ ಗಾರ್ಡ್​ಗಳ ಸಾಹಸಕ್ಕೆ ಪ್ರವಾಸಿಗರು ಮೆಚ್ಚುಗೆ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಲೈಫ್​ಗಾರ್ಡ್​ಗಳಾದ ಹನುಮಂತ, ಸಂದೀಪ್​ ಹರಿಕಾಂತ, ಕೇಶವ ಮೊಗೇರ ಹಾಗೂ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ ಇದ್ದರು.

ಓದಿ:ಪೊಲೀಸ್ ಅಧಿಕಾರಿಗೆ ಕೂಲ್ ಡ್ರಿಂಕ್ ಹಂಚುವ ಶಿಕ್ಷೆ ವಿಧಿಸಿದ ಗುಜರಾತ್​​ ಹೈಕೋರ್ಟ್

Last Updated : Feb 16, 2022, 8:08 PM IST

ABOUT THE AUTHOR

...view details