ಕಾರವಾರ: ಸಮುದ್ರದಲ್ಲಿ ಈಜಲು ಇಳಿದು ನೀರಿನ ಸೆಳೆತಕ್ಕೆ ಸಿಲುಕಿದ್ದ ಪ್ರವಾಸಿಗನೋರ್ವನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ನಡೆದಿದೆ.
ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ ಮಾಡಿದ ಜೀವರಕ್ಷಕ ಸಿಬ್ಬಂದಿ - undefined
ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ನೀರಿನ ಸೆಳೆತಕ್ಕೆ ಪ್ರವಾಸಿಯೋರ್ವರು ಸಿಲುಕಿದ್ದರು, ಇದನ್ನು ಗಮನಿಸಿದ ಜೀವರಕ್ಷಣ ಸಿಬ್ಬಂದಿಗಳು ಅವರನ್ನು ಕಾಪಾಡಿದ್ದಾರೆ.
ಜೀವರಕ್ಷಕ ಸಿಬ್ಬಂದಿ
ರಾಹುಲ್ಜಿತ್ ಕಲಿತ್ (21) ಪ್ರಾಣಪಾಯದಿಂದ ಪಾರಾದ ಪ್ರವಾಸಿಗ. ಅಸ್ಸಾಂನಿಂದ ನಾಲ್ಕು ಜನ ಸ್ನೇಹಿತರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಇಳಿದಾಗ ಕಲಿತ್ ನೀರಿನ ಸುಳಿಯಲ್ಲಿ ಸಿಲುಕಿದ್ದಾರೆ. ತಕ್ಷಣ ಜೊತೆಯಲ್ಲಿದ್ದವರು ಕೂಗಿ ಕೊಂಡಿದ್ದಾರೆ. ಅಲ್ಲಿಯೇ ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಧಾವಿಸಿ ಇವರನ್ನು ರಕ್ಷಿಸಿ ಪ್ರಣಾಪಾಯದಿಂದ ಪಾರು ಮಾಡಿದ್ದಾರೆ.
ಸಂಜೀವ ಹೊಸ್ಕಟ್ಟಾ, ನಿತ್ಯಾನಂದ ಹರಿಕಂತ್ರ ಪ್ರವಾಸಿಗನನ್ನು ಸಂರಕ್ಷಿಸಿದ ಜೀವರಕ್ಷಕ ಸಿಬ್ಬಂದಿಗಳು.