ಕಾರವಾರ :ವರ್ಷದ ಆರಂಭದಿಂದಲೂ ಭಾರಿ ಮಳೆ, ನೆರೆ, ಚಂಡಮಾರುತದ ಕಾಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಮೀನುಗಾರರಿಗೆ ಇದೀಗ ಕೊರೊನಾ ಸಮಸ್ಯೆಯಿಂದಾಗಿ ಇನ್ನಿಲ್ಲದ ನಷ್ಟ ಎದುರಿಸುವಂತಾಗಿದೆ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ರಾಜಕೀಯ ಮುಖಂಡರು ಹಾಗೂ ಮೀನುಗಾರರು ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಿದ್ದಾರೆ.
ಸಂಕಷ್ಟದಲ್ಲಿರುವ ಮೀನುಗಾರರಿಗೆ 'ವಿಶೇಷ ಪ್ಯಾಕೇಜ್' ನೀಡಲು ಸರ್ಕಾರಕ್ಕೆ ಒತ್ತಾಯ.. - ಸಾಂಪ್ರದಾಯಿಕ ಮೀನುಗಾರರ ಕಡೆಗಣನೆ
ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ನೇಕಾರರು, ಆಟೋ/ಟ್ಯಾಕ್ಸಿ ಚಾಲಕರು, ಅಗಸರಿಗೆ ಸರ್ಕಾರ ನೆರವು ನೀಡಿದೆ. ಆದ್ರೆ ಸಾಂಪ್ರದಾಯಿಕ ಮೀನುಗಾರರನ್ನ ಕಡೆಗಣಿಸಿರೋದು ಸಮಂಜಸವಲ್ಲ ಎಂದು ಮೀನುಗಾರರಾದ ಜೈ ವಿಠ್ಠಲ್ ಕುಬಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
![ಸಂಕಷ್ಟದಲ್ಲಿರುವ ಮೀನುಗಾರರಿಗೆ 'ವಿಶೇಷ ಪ್ಯಾಕೇಜ್' ನೀಡಲು ಸರ್ಕಾರಕ್ಕೆ ಒತ್ತಾಯ.. let-govt-special-package-for-fishermen-in-distress-the-insistence-of-fishermen](https://etvbharatimages.akamaized.net/etvbharat/prod-images/768-512-7137540-100-7137540-1589095624743.jpg)
ಸಾಂಪ್ರದಾಯಿಕ ಮೀನುಗಾರಿಕೆ ಕಡೆಗಣನೆ ಸರಿಯಲ್ಲ:ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಲಾಭ ಪಡೆಯಬಹುದು ಎಂದುಕೊಂಡಿದ್ದ ಮೀನುಗಾರರಿಗೆ ಕೊರೊನಾ ಇನ್ನಿಲ್ಲದ ಹೊಡೆತ ನೀಡಿದೆ. ಲಾಕ್‌ಡೌನ್‌ನಿಂದಾಗಿ ಪರ್ಸೀನ್ ಬೋಟ್, ಟ್ರಾಲ್ ಬೋಟ್‌ಗಳು ನೀರಿಗಿಳಿದಿರಲಿಲ್ಲ. ಆದರೆ, ಇದೀಗ ವಾರದ ಹಿಂದೆ ಅವಕಾಶ ನೀಡಲಾಗಿದೆ. ಇನ್ನು, ಕೆಲವೇ ದಿನಗಳು ಮಾತ್ರ ಮೀನುಗಾರಿಕೆಗೆ ಅವಕಾಶವಿದೆ. ಆದರೆ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ನೇಕಾರರು, ಆಟೋ/ಟ್ಯಾಕ್ಸಿ ಚಾಲಕರು, ಅಗಸರಿಗೆ ಸರ್ಕಾರ ನೆರವು ನೀಡಿದೆ. ಆದರೆ, ಸಾಂಪ್ರದಾಯಿಕ ಮೀನುಗಾರರನ್ನ ಕಡೆಗಣಿಸಿರೋದು ಸಮಂಜಸವಲ್ಲ ಎಂದು ಮೀನುಗಾರರಾದ ಜೈ ವಿಠ್ಠಲ್ ಕುಬಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೀನುಗಾರರ ಸಾಲದ ಬಡ್ಡಿ ಮನ್ನಾ ಮಾಡಿ:ಜಿಲ್ಲೆಯ ಕರಾವಳಿ ಭಾಗದಲ್ಲಿ ಸುಮಾರು 35,000 ಮೀನುಗಾರರ ಕುಟುಂಬಗಳಿವೆ. ಕಳೆದ ಬಾರಿ ಸಾಲ ಮನ್ನಾ ಮಾಡಿದರೂ ನಮ್ಮ ಜಿಲ್ಲೆಗೆ ಪ್ರಯೋಜನವಾಗಿರಲಿಲ್ಲ. ಈ ಕಾರಣದಿಂದ ಮೀನುಗಾರರ ಸಂಕಷ್ಟಕ್ಕೆ ಧ್ವನಿಯಾಗಿರುವ ಶಾಸಕ ದಿನಕರ್ ಶೆಟ್ಟಿ, ಮೀನುಗಾರರು ಕಳೆದ 6 ತಿಂಗಳಿಂದ ಮೀನಿನ ಕ್ಷಾಮ ಹಾಗೂ ಪ್ರಸ್ತುತ ಪರಿಸ್ಥಿತಿಯಿಂದ ನಿರ್ಗತಿಕರಾಗೋ ಸಂದರ್ಭವಿದೆ. ಇದರಿಂದಾಗಿ ಮುಖ್ಯಮಂತ್ರಿಗಳು ಜಿಲ್ಲೆಯ ಮೀನುಗಾರರಿಗೂ ಯಾವುದಾದರೂ ಪ್ಯಾಕೇಜ್ ಘೋಷಣೆ ಮಾಡ್ಬೇಕು. ಇಲ್ಲವಾದಲ್ಲಿ ಮೀನುಗಾರರ ಸಾಲದ ಬಡ್ಡಿಯಾದರೂ ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.