ಕರ್ನಾಟಕ

karnataka

ETV Bharat / state

ಭಟ್ಕಳ: ಗುಡ್ಡ ಪ್ರದೇಶದಲ್ಲಿ ಹೆಣ್ಣು ಚಿರತೆಯ ಮೃತ ದೇಹ ಪತ್ತೆ : ಬೇರೆ ಪ್ರಾಣಿ ಕಚ್ಚಿ ಮೃತಪಟ್ಟಿರುವ ಶಂಕೆ - leopards dead body found in bhatkala

ಆಹಾರ ಹುಡುಕುತ್ತ ಕಾಡಿನಿಂದ ಗುಡ್ಡ ಪ್ರದೇಶಕ್ಕೆ ಬಂದ ಚಿರತೆಯೊಂದಿಗೆ ಬೇರೊಂದು ಪ್ರಾಣಿ ಕಾಳಗ ನಡೆಸಿದೆ. ನಂತರ ಆ ಪ್ರಾಣಿ ಚಿರತೆಯನ್ನು ಕಚ್ಚಿ ಸಾಯಿಸಿರಬಹುದೆಂದು ಶಂಕಿಸಲಾಗಿದೆ..

leopards-dead-body-found-at-bhatkala
ಗುಡ್ಡ ಪ್ರದೇಶದಲ್ಲಿ ಹೆಣ್ಣು ಚಿರತೆಯ ಮೃತ ದೇಹ ಪತ್ತೆ

By

Published : Aug 22, 2021, 8:15 PM IST

ಭಟ್ಕಳ :ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಾಂದ ಗ್ರಾಮದ ಗುಡ್ಡ ಪ್ರದೇಶದಲ್ಲಿ ಹೆಣ್ಣು ಚಿರತೆಯ ಮೃತ ದೇಹ ಪತ್ತೆಯಾಗಿದೆ.

ಗುಡ್ಡ ಪ್ರದೇಶದಲ್ಲಿ ಹೆಣ್ಣು ಚಿರತೆಯ ಮೃತ ದೇಹ ಪತ್ತೆ

ಆಹಾರ ಹುಡುಕುತ್ತ ಕಾಡಿನಿಂದ ಗುಡ್ಡ ಪ್ರದೇಶಕ್ಕೆ ಬಂದ ಚಿರತೆಯೊಂದಿಗೆ ಬೇರೊಂದು ಪ್ರಾಣಿ ಕಾಳಗ ನಡೆಸಿದೆ. ನಂತರ ಆ ಪ್ರಾಣಿ ಚಿರತೆಯನ್ನು ಕಚ್ಚಿ ಸಾಯಿಸಿರಬಹುದೆಂದು ಶಂಕಿಸಲಾಗಿದೆ. ಚಿರತೆಯ ಮೃತ ದೇಹ ನೋಡಿದ ಅಲ್ಲಿನ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ನಂತರ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಮೃತ ದೇಹಕ್ಕೆ ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಎಸಿಎಫ್ ಬಾಲಚಂದ್ರ ಹೆಚ್ ಸಿ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಉಪಸ್ಥಿತರಿದ್ದರು.

ಓದಿ:ಅವನೇನು ಮುಖ್ಯಮಂತ್ರಿಯೋ, ಪ್ರಧಾನಮಂತ್ರಿಯೋ.. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ಕಾಶಪ್ಪನವರ್​ ಕಿಡಿ

ABOUT THE AUTHOR

...view details