ಕಾರವಾರ: ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯೊಂದನ್ನು ರಕ್ಷಣೆ ಮಾಡಿರುವ ಘಟನೆ ಶಿರಸಿ ತಾಲೂಕಿನ ಜಾನ್ಮನೆ ವಲಯದ ಶಿರಗುಣಿಯಲ್ಲಿ ನಡೆದಿದೆ. ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿದ್ದ ಚಿರತೆ ಕಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯ ರಕ್ಷಣೆ! - leopard pretected from the fence
ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆ ರಕ್ಷಿಸಿರುವ ಘಟನೆ ಶಿರಸಿಯ ಶರಗುಣಿಯಲ್ಲಿ ನಡೆದಿದೆ. ತೋಟದ ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ವನ್ಯಜೀವಿ ವೈದ್ಯರ ಸಹಕಾರದಿಂದ ಅರವಳಿಕೆ ನೀಡಿ ಚಿರತೆಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯ ರಕ್ಷಣೆ!
ಬಳಿಕ ಸ್ಥಳಕ್ಕಾಗಮಿಸಿದ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಜಿ ಹೆಗಡೆ, ಶಿವಮೊಗ್ಗದ ವನ್ಯಜೀವಿ ವೈದ್ಯರ ಸಹಕಾರದಿಂದ ಚುಚ್ಚುಮದ್ದು ನೀಡಿ ಚಿರತೆ ರಕ್ಷಿಸಲಾಗಿದೆ. ಚಿರತೆಯನ್ನು ಬೋನಿನಲ್ಲಿ ಹಾಕಿಕೊಂಡು ಒಯ್ಯಲಾಗಿದ್ದು ಸದ್ಯ ಸ್ಥಳೀಯರ ಆತಂಕ ದೂರವಾಗಿದೆ.
ಓದಿ :ಉತ್ತರಪ್ರದೇಶ ಚುನಾವಣೆ: ಇಂದು 6ನೇ ಹಂತದ ಮತದಾನ..ಸಿಎಂ ಯೋಗಿ, ಮಾಜಿ ಸಚಿವ ಪ್ರಸಾದ್ ಮೌರ್ಯ ಅದೃಷ್ಟ ಪರೀಕ್ಷೆ