ಕರ್ನಾಟಕ

karnataka

ETV Bharat / state

ಪುರಾಣ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ: ತಪ್ಪಿದ ಭಾರಿ ಅನಾಹುತ - Heavy rainfall news

ಭಾರಿ ಮಳೆಯಿಂದ ಪುರಾಣ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿದಿದೆ. ಅದೃಷ್ಟವಶಾತ್​​ ದೇವಸ್ಥಾನಕ್ಕೆ ಹಾನಿಯಾಗುವುದು ಸ್ವಲ್ಪದರಲ್ಲಿಯೇ ತಪ್ಪಿದೆ.

Landslide In Maneshwar Temple
ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ

By

Published : Sep 24, 2020, 4:07 PM IST

Updated : Sep 24, 2020, 4:33 PM IST

ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪುರಾಣ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತವಾಗಿದ್ದು, ಅದೃಷ್ಟವಶಾತ್ ದೇವಸ್ಥಾನಕ್ಕೆ ಯಾವುದೇ ಹಾನಿ ಆಗಿಲ್ಲ.

ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಾಣೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿರುವ ಗುಡ್ಡ ಕುಸಿದಿದ್ದು, ಈ ವೇಳೆ ದೊಡ್ಡ ಕಲ್ಲುಬಂಡೆ ಜಾರಿದೆ. ಪಕ್ಕದಲ್ಲಿ ಬೃಹದಾಕಾರದ ಮರವಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ

ಪಕ್ಕದಲ್ಲೇ ಮನೆಗಳಿದ್ದು, ಗುಡ್ಡದ ಬಲಭಾಗಕ್ಕೆ ಜಾರಿದ್ದರೆ ಮನೆಯ ಮೇಲೆ ಬೀಳುವ ಸಂಭವವಿತ್ತು. ಎಡಭಾಗಕ್ಕೆ ಜಾರಿದ್ದಲ್ಲಿ ದೇವಸ್ಥಾನದ ಮೇಲೆ ಬೀಳುವ ಅಪಾಯ ಇತ್ತು. ಅದೃಷ್ಟವಶಾತ್ ಬಂಡೆ ಮರದ ಬಳಿಯೇ ಜಾರಿ ನಿಂತಿದ್ದರಿಂದ ದೊಡ್ಡ ಹಾನಿ ತಪ್ಪಿದಂತಾಗಿದೆ.

Last Updated : Sep 24, 2020, 4:33 PM IST

ABOUT THE AUTHOR

...view details