ಭಟ್ಕಳ :ಕಳೆದ ಎರಡು ತಿಂಗಳಿನಿಂದಿದ್ದ ಲಾಕ್ಡೌನ್ನ ಶುಕ್ರವಾರದಿಂದ ಜಿಲ್ಲಾಡಳಿತ ಸಡಿಲಿಕೆ ಮಾಡಿದೆ. ಇದೀಗ ಜನ ಸಾಮಾಜಿಕ ಅಂತರ ಪಾಲನೆ ಮಾಡದೇ ನಿರ್ಲಕ್ಷ ತೋರುತ್ತಿದ್ದಾರೆ.
ಭಟ್ಕಳದಲ್ಲಿ ಲಾಕ್ಡೌನ್ ಸಡಿಲಿಕೆ.. ಸಾಮಾಜಿಕ ಅಂತರ ಮರೆತ ಜನರು
ಮೂರು ದಿನಗಳಿಂದ ಹೊರ ಬರಲು ಭಯ ಪಟ್ಟಿದ್ದ ಜನ ಇಂದು ರಾಜಾರೋಷವಾಗಿ ಸಾಮಾಜಿಕ ಅಂತರ ಮರೆತು ಓಡಾಡಿರುವುದು ಕಂಡು ಬಂದಿತು. ಪಟ್ಟಣದಲ್ಲಿ ಶೇ.90ರಷ್ಟು ಅಂಗಡಿ -ಮುಂಗಟ್ಟು ತೆರೆದಿವೆ.
ಜಿಲ್ಲಾಡಳಿತ ಗುರುತಿಸಿದಂತೆ ಪಟ್ಟಣ ವ್ಯಾಪ್ತಿಯ 5 ಕಂಟೇನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಕಳೆದ ಮೂರು ದಿನಗಳಿಂದ ಲಾಕ್ಡೌನ ವಿನಾಯಿತಿ ನೀಡಿದೆ. ಇದರಿಂದ ಕಳೆದ ಮೂರು ದಿನಗಳಿಂದ ಹೊರ ಬರಲು ಭಯ ಪಟ್ಟಿದ್ದ ಜನ ಇಂದು ರಾಜಾರೋಷವಾಗಿ ಸಾಮಾಜಿಕ ಅಂತರ ಮರೆತು ಓಡಾಡಿರುವುದು ಕಂಡು ಬಂದಿತು. ಪಟ್ಟಣದಲ್ಲಿ ಶೇ.90ರಷ್ಟು ಅಂಗಡಿ -ಮುಂಗಟ್ಟು ತೆರೆದಿವೆ. ಜನರು ನಿರ್ಭಯವಾಗಿ ಖರೀದಿಯಲ್ಲಿ ತೊಡಗಿದ್ದಾರೆ.
ಕೆಲವರು ಮಾಸ್ಕ ಧರಿಸಿದ್ದರೆ ಇನ್ನು ಕೆಲವರು ಹಾಗೆ ಸಂಚರಿಸುತ್ತಿದ್ದಾರೆ. ಸಾಮಾಜಿಕ ಅಂತರಕ್ಕೆ ಜನರು ಖ್ಯಾರೇ ಎನ್ನುತ್ತಿಲ್ಲ. ಲಾಕ್ಡೌನ್ ಸಡಿಲಿಕೆಯಿಂದ ತೆರೆದ ಅಂಗಡಿಗಳು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಮತ್ತೆ ಮುಚ್ಚಲಾಯಿತು.