ಕಾರವಾರ (ಉ.ಕ): ಕುಮುಟಾ ಸುತ್ತಲಿನ ಪ್ರದೇಶದ ಆಗಸದಲ್ಲಿಂದು ಕೌತುಕ ನಿರ್ಮಾಣಗೊಂಡಿತ್ತು. ಮೋಡಗಳ ಮರೆಯಲ್ಲಿನ ಸೂರ್ಯನ ಸುತ್ತ ಕಾಮನಬಿಲ್ಲಿನ ಕಂಕಣ ಮೂಡಿತ್ತು. ವೈಜ್ಞಾನಿಕವಾಗಿ ಹ್ಯಾಲೋರಿಂಗ್ ಎಂದು ಕರೆಸಿಕೊಳ್ಳುವ ಈ ಕೌತುಕವನ್ನು ಜನರು ಕಣ್ತುಂಬಿಕೊಂಡರು.
ಆಗಸದಲ್ಲಿ ಹ್ಯಾಲೋರಿಂಗ್ ಕೌತುಕ: ಕುಮುಟಾ ಮಂದಿಯಲ್ಲಿ ಕುತೂಹಲ - KUMUTA NEWS
ಕುಮುಟಾ ಭಾಗದಲ್ಲಿ ಸೂರ್ಯನ ಸುತ್ತಲೂ ಪ್ರಭಾವಳಿಯಂತಹ ಬೆಳಕು ಗೋಚರಿಸಿದ್ದು ನೋಡುಗರನ್ನು ಚಕಿತಗೊಳಿಸಿತು.

ಆಗಸದಲ್ಲಿ ಹ್ಯಾಲೋರಿಂಗ್ ಕೌತುಕ.
ಸೂರ್ಯನ ಕಿರಣಗಳು ಮೋಡಗಳ ಮೂಲಕ ಹಾದು ಹೋಗುವಾಗ ಉಂಗುರದಂತೆ ಬೆಳಕು ಪ್ರಜ್ವಲಿಸುತ್ತದೆ. ಈ ವಿದ್ಯಮಾನವು ಸಾಮಾನ್ಯವಾಗಿ ಶೀತ ದೇಶಗಳಲ್ಲಿ ಕಂಡುಬರುತ್ತದೆ ಎಂದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಸಂಜೀವ್ ದೇಶಪಾಂಡೆ ಸ್ಪಷ್ಟಪಡಿಸಿದರು.
ಸೂರ್ಯನ ಸುತ್ತ ಮೂಡಿದ್ದ ಈ ಅಚ್ಚರಿಯನ್ನು ಜನರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಖುಷಿಪಟ್ಟರು.