ಕಾರವಾರ: ಕರ್ತವ್ಯದಲ್ಲಿ ಇದ್ದಾಗಲೇ ಬಸ್ ಚಾಲಕರೊಬ್ಬರಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮುಂಡಗೋಡ ತಾಲೂಕಿನ ಮೈನಳ್ಳಿ ಬಳಿ ನಡೆದಿದೆ. ಮಲ್ಲಪ್ಪ ಸೋಮಪ್ಪನವರ (45) ಮೃತ ಚಾಲಕನಾಗಿದ್ದಾರೆ.
ಯಲ್ಲಾಪುರದಿಂದ ಮುಂಡಗೋಡಿಗೆ ಬಸ್ ಚಾಲನೆ ಮಾಡುತ್ತಿರುವಾಗ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಬಸ್ ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಬಳಿಕ ಎದೆ ನೋವು ವಿಪರೀತಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ತಪಾಸಣೆ ನಡೆಸಿದ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.