ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 103 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 68 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಉ.ಕನ್ನಡದಲ್ಲಿ ಮತ್ತೆ 103 ಮಂದಿಗೆ ಕೊರೊನಾ...5 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ - news corona cases from karwar
ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ 103 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.ಈವರೆಗೆ ಜಿಲ್ಲೆಯಲ್ಲಿ ಒಟ್ಟು 5069 ಸೋಂಕಿತರು ಪತ್ತೆಯಾಗಿದ್ದು, 3811 ಮಂದಿ ಗುಣಮುಖರಾಗಿದ್ದಾರೆ.
![ಉ.ಕನ್ನಡದಲ್ಲಿ ಮತ್ತೆ 103 ಮಂದಿಗೆ ಕೊರೊನಾ...5 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ kovid cases updates from uttar kannada](https://etvbharatimages.akamaized.net/etvbharat/prod-images/768-512-8641135-thumbnail-3x2-nincopy.jpg)
5 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ
ಹಳಿಯಾಳ 29, ಕಾರವಾರ 6, ಭಟ್ಕಳ 8, ಮುಂಡಗೋಡ 6, ಶಿರಸಿ 25, ಹೊನ್ನಾವರ 9, ಕುಮಟಾ 4, ಅಂಕೋಲಾದ 11, ಯಲ್ಲಾಪುರ 1, ಸಿದ್ದಾಪುರ 3 ಹಾಗೂ ಜೊಯಿಡಾದ ಓರ್ವರಿಗೆ ಇಂದು ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದ 3, ಅಂಕೋಲಾ 5, ಯಲ್ಲಾಪುರ 2, ಹೊನ್ನಾವರ 27, ಮುಂಡಗೋಡ 6, ಹಳಿಯಾಳದ 25 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 5069 ಸೋಂಕಿತರು ಪತ್ತೆಯಾಗಿದ್ದು, 3811 ಮಂದಿ ಗುಣಮುಖರಾಗಿದ್ದಾರೆ. 1204 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಈವರೆಗೆ ಒಟ್ಟು 54 ಮಂದಿ ಸಾವನ್ನಪ್ಪಿದ್ದಾರೆ.