ಕರ್ನಾಟಕ

karnataka

ETV Bharat / state

ಬೈಕ್​ನಿಂದ ಬಿದ್ದು ಗಾಯಗೊಂಡ ದಂಪತಿ-ಮಗು: ಆಸ್ಪತ್ರೆ ಸೇರಿಸಲು ನೆರವಾದ ಸಚಿವ! - minister kota srinivas poojari saved child life in karwara

ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಮಟಾ ಪಟ್ಟಣದ ದಂಪತಿಗಳಿಬ್ಬರು ಮಗುವಿನೊಂದಿಗೆ ಬೈಕ್ ಮೂಲಕ ತೆರಳುವಾಗ ಬಿದ್ದು ಗಾಯಗೊಂಡಿದ್ದರು. ಅದೇ ಹೊತ್ತಿಗೆ ಉಡುಪಿಯಿಂದ ಶಿರಸಿಯ ಸ್ವರ್ಣವಲ್ಲಿ ಮಠದಲ್ಲಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಾರನ್ನು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದರು.

karwara
ಕಾರವಾರ

By

Published : Mar 1, 2021, 9:29 PM IST

ಕಾರವಾರ: ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದು ಗಾಯಗೊಂಡಿದ್ದ ದಂಪತಿ ಹಾಗೂ ಮಗುವನ್ನು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಸೇರಿಸಲು ನೆರವಾಗಿರುವ ಘಟನೆ ಕುಮಟಾದಲ್ಲಿ ನಡೆದಿದೆ.

ಗಾಯಗೊಂಡ ದಂಪತಿ-ಮಗುವನ್ನು ಆ್ಯಂಬುಲನ್ಸ್​ವರೆಗೆ ತಲುಪಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಮಟಾ ಪಟ್ಟಣದ ದಂಪತಿಗಳಿಬ್ಬರು ಮಗುವಿನೊಂದಿಗೆ ಬೈಕ್ ಮೂಲಕ ತೆರಳುವಾಗ ನಾಯಿ ಅಡ್ಡ ಬಂದ ಪರಿಣಾಮ ಬಿದ್ದು ಗಾಯಗೊಂಡಿದ್ದರು. ಅದೇ ಹೊತ್ತಿಗೆ ಉಡುಪಿಯಿಂದ ಶಿರಸಿಯ ಸ್ವರ್ಣವಲ್ಲಿ ಮಠದಲ್ಲಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಾರನ್ನು ನಿಲ್ಲಿಸಿ ವಿಚಾರಿಸಿದ್ದಾರೆ.

ಉದಾ:ಒಂದು ತಿಂಗಳವರೆಗೆ ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿ..!

ಅನಂತರ ತಮ್ಮದೇ ಕಾರಿನಲ್ಲಿ ಗಾಯಗೊಂಡವರನ್ನು ಹೊಳೆಗದ್ದೆ ಟೋಲ್​ಗೇಟ್​ವರೆಗೆ ಕೊಂಡೊಯ್ದು, ಅಲ್ಲಿನ ಆಂಬುಲೆನ್ಸ್ ಮೂಲಕ ಕುಮಟಾದ ಸರ್ಕಾರಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಗಾಯಾಳುಗಳನ್ನು ಆಸ್ಪತ್ರೆ ಸೇರಿಸಲು ನೆರವಾದ ಸಚಿವರ ಮಾನವೀಯತೆಗೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.

For All Latest Updates

ABOUT THE AUTHOR

...view details