ಶಿರಸಿ (ಉತ್ತರಕನ್ನಡ):ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ಅಗತ್ಯ ಕಿಟ್ಗಳನ್ನು ಪೂರೈಕೆ ಮಾಡಿದೆ. ಕಿಟ್ ತಯಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದು, ಗುತ್ತಿಗೆ ನೀಡಲು ಅನುಸರಿಸಿರುವ ಸರ್ಕಾರದ ನೀತಿ, ಪಾರದಕ್ಷತೆಯ ಕುರಿತು ಇಲಾಖೆ ಸ್ಪಷ್ಟಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಕಾರ್ಮಿಕರಿಗೆ ಕಿಟ್ ಹಂಚಿಕೆ ವಿಚಾರ: ಕಾಂಗ್ರೆಸ್, ಬಿಜೆಪಿ ಮುಖಂಡರ ನಡುವೆ ವಾಕ್ಸಮರ - ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರಿಗೆ ಪೂರೈಕೆ ಮಾಡಿರುವ ಕಿಟ್‍ನ ಮೌಲ್ಯ ಒಂದೇ ರೀತಿ ಇಲ್ಲ. ಪ್ರತಿ ಕಿಟ್‍ಗೆ 290 ರಿಂದ ಗರಿಷ್ಠ 899 ರೂ. ಬೆಲೆ ನಮೂದಾಗಿರುವುದು ಸಂಶಯಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕಾರ್ಮಿಕ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಕಾರ್ಮಿಕ ಇಲಾಖೆ ರಾಜ್ಯದ ವಿವಿಧ ಭಾಗದ 19 ಸಂಸ್ಥೆಗಳಿಗೆ ಕಿಟ್ ತಯಾರಿಕೆಗೆ ಅವಕಾಶ ನೀಡಿದ್ದು, ಅವುಗಳಲ್ಲಿ 17 ಖಾಸಗಿ ಸಂಸ್ಥೆಗಳಾಗಿವೆ. 6 ಲಕ್ಷ 8 ಸಾವಿರ ಆಹಾರ ಕಿಟ್ ಕಾರ್ಮಿಕ ಕಲ್ಯಾಣ ಮಂಡಳಿಗೆ ಪೂರೈಕೆ ಮಾಡಿದ ಸಂಸ್ಥೆಗಳಲ್ಲಿ 2 ಮಾತ್ರ ಸಹಕಾರಿ ಸಂಸ್ಥೆಗಳಾಗಿವೆ. ಪೂರೈಕೆ ಮಾಡಿದ ಕಿಟ್‍ನ ಮೌಲ್ಯ ಒಂದೇ ರೀತಿ ಇಲ್ಲ. ಪ್ರತಿ ಕಿಟ್‍ಗೆ 290 ರಿಂದ ಗರಿಷ್ಠ 899 ರೂ. ಬೆಲೆ ನಮೂದಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಕಾರ್ಮಿಕ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಒಟ್ಟು 19 ಸಂಸ್ಥೆಯಿಂದ ಸುಮಾರು 48 ಕೋಟಿ ರೂಗಳ ಆಹಾರ ಕಿಟ್ ತಯಾರಿಸಲ್ಪಟ್ಟಿದ್ದು, ಅವುಗಳ ಹಂಚಿಕೆಯೂ ನಡೆದಿದೆ. ಶಿರಸಿಯ ಸಹಕಾರಿ ಸಂಸ್ಥೆಯೂ ಸಹ ಇಲಾಖೆಗೆ ಕಿಟ್ ಪೂರೈಕೆ ಮಾಡಿದೆ. ಆದರೆ, ಇದರಲ್ಲಿ ಯಾವುದೇ ಲೋಪವಾಗದೇ, ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಎಲ್ಲರೂ ಕಾರ್ಮಿಕ ಇಲಾಖೆಯತ್ತ ತಿರುಗಿ ನೋಡುವಂತೆ ಸಚಿವ ಶಿವರಾಮ್ ಹೆಬ್ಬಾರ್ ಕೆಲಸ ಮಾಡಿದ್ದಾರೆ. ಕೆಲಸವಿಲ್ಲದವರು ಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ರಾಜೇಶ ಶೆಟ್ಟಿ ತಿರುಗೇಟು ನೀಡಿದ್ದಾರೆ.