ಕರ್ನಾಟಕ

karnataka

ETV Bharat / state

ಅಪ್ರಾಪ್ತ ಬಾಲಕಿಯರ ಅಪಹರಣ... ಮೂವರ ಬಂಧನ - pocso act

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಉತ್ತರ ಕನ್ನಡದ ಯಲ್ಲಾಪುರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

kidnappers-arrest

By

Published : Sep 21, 2019, 3:01 AM IST

ಶಿರಸಿ:ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರ ಅಪಹರಣ ಮಾಡಿದ್ದ ಮೂವರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಉತ್ತರ ಕನ್ನಡದ ಯಲ್ಲಾಪುರ ಪೊಲೀಸರು ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಹಾರಾಷ್ಟ್ರದ ಉಸ್ಮಾನಾಬಾದಿನ ಅಸ್ಲಂ ಇಸಾಕ್ ತಂಬೋಳಿ, ಅಂಕೋಲಾದ ಹಳವಳ್ಳಿಯ ದೇವೇಂದ್ರ ನಾಗೇಶ ಸಿದ್ದಿ, ಮಂಚಿಕೇರಿಯ ಮೊತೇಶ ಸಂತಾನ ಸಿದ್ಧಿ ಬಂಧಿತರು.

ಸೆ.12ರಂದು ಕಂಪ್ಯೂಟರ್ ತರಗತಿಗೆ ಬಂದ ಅಪ್ರಾಪ್ತ ಬಾಲಕಿಯನ್ನು ಅಸ್ಲಂ ಅಪಹರಿಸಿದ್ದ. ದೇವಸ್ಥಾನಕ್ಕೆ ಹೋಗಿದ್ದ ಬಾಲಕಿಯನ್ನು ದೇವೇಂದ್ರ ಮತ್ತು ಮೊತೇಶ ಅಪಹರಿಸಿದ್ದರು.

ಕಾಣೆಯಾದ ಬಾಲಕಿಯರನ್ನು ಪತ್ತೆಹಚ್ಚಿ, ಮಹಾರಾಷ್ಟ್ರದ ಪೂನಾದಲ್ಲಿ ಆರೋಪಿ ಅಸ್ಲಂನನ್ನು, ಯಲ್ಲಾಪುರದ ಕಸಬೆಯಲ್ಲಿ ದೇವೇಂದ್ರನನ್ನು ಮತ್ತು ಯಲ್ಲಾಪುರ ತಾಲೂಕಿನ ಬಿಳಕಿಯಲ್ಲಿ ಮೊತೇಶನನ್ನು ಬಂಧಿಸಲಾಗಿದೆ.

ABOUT THE AUTHOR

...view details