ಭಟ್ಕಳ(ಉತ್ತರ ಕನ್ನಡ): ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೋರ್ವರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶಿರಾಲಿ ಬಡ್ಡುಕುಳಿಯಲ್ಲಿ ನಡೆದಿದೆ.
ಪ್ರಥಮ ಚಿಕಿತ್ಸೆ:ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಹರಿಕೃಷ್ಣ ಪಿ ಎಂದು ಗುರುತಿಸಲಾಗಿದ್ದು, ಇವರು ಕೇರಳ ಮೂಲದ ಕೊಲ್ಲಂ ಕಡೆಯವರು ಎಂದು ತಿಳಿದು ಬಂದಿದೆ. ಇವರು ನೇತ್ರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಮುಂಬೈನಿಂದ ಕೇರಳದ ಕೊಲ್ಲಂ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಶಿರಾಲಿಯ ಬಡ್ಡುಕುಳಿ ಬದ್ದುಕುಳಿ ಸಮೀಪ ಆಯತಪ್ಪಿ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅಲ್ಲಿನ ಸ್ಥಳೀಯರು 108ರ ಆ್ಯಂಬುಲೆನ್ಸ್ ಮೂಲಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಸಾಗಿಸಿದ್ದಾರೆ.