ಕಾರವಾರ:ತೈಲ ಟ್ಯಾಂಕ್ ಒಡೆದ ವಿಚಾರ ಗಮನಕ್ಕೆ ಬಾರದೆ ಹತ್ತಾರು ಕಿ.ಮೀ ಡೀಸೆಲ್ ಸೋರಿಕೆಯಾಗುತ್ತಲೇ ರೈಲು ಚಲಿಸಿದೆ. ಅದೃಷ್ಟವಶಾತ್ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಅವಘಡವೊಂದು ತಪ್ಪಿರುವ ಘಟನೆ ಕಾರವಾರ-ಬೆಂಗಳೂರು ಸೆಂಟ್ರಲ್ ರೈಲಿನಲ್ಲಿ ನಡೆದಿದೆ.
ಕಾರವಾರದ ಶಿರವಾಡ ರೈಲು ನಿಲ್ದಾಣದಿಂದ ಹೊರಟಿದ್ದ ಕಾರವಾರ ಬೆಂಗಳೂರು ಸೆಂಟ್ರಲ್ ರೈಲು ಸಂಖ್ಯೆ 16524 ರ ಮುಂಭಾಗದಲ್ಲಿದ್ದ ಎಂಜಿನ್ನ ತೈಲ ಟ್ಯಾಂಕರ್ ಒಡೆದು ಇಂಧನ ಸೋರಿಕೆಯಾಗುತ್ತಲೇ ಸಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಅಂಕೋಲಾದ ಹಾರವಾಡ ಬಳಿ ಇರುವ ಸುರಂಗ ಮಾರ್ಗದಲ್ಲಿ ತೈಲ ಟ್ಯಾಂಕ್ ಒಡೆದಿದ್ದು, ಅಂಕೋಲಾವರೆಗೂ ಚಲಿಸಿದೆ.