ಕಾರವಾರ: ಕರ್ನಾಟಕದ ಕಾಶ್ಮೀರ ಎಂದರೆ ನೆನಪಾಗೋದು ಕಾರವಾರ. ಇಲ್ಲಿನ ಠಾಗೋರ್ ಕಡಲತೀರ ಸೇರಿದಂತೆ ಹಲವು ಪ್ರವಾಸಿ ತಾಣಗಳು ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೀಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಲ್ಕು ಸುರಂಗಗಳನ್ನು ನಿರ್ಮಿಸಲಾಗಿದ್ದು, ಕಾರವಾರಕ್ಕೆ ಬರುವ ಪ್ರವಾಸಿಗರು ಸುರಂಗ ಮಾರ್ಗದಲ್ಲಿ ಹೋಗುವ ಅನುಭವವನ್ನು ಸಹ ಪಡೆಯುವಂತಾಗಿದೆ.
ಹೌದು, ಕಡಲನಗರಿ ಕಾರವಾರ ಪ್ರವಾಸಿಗರ ನೆಚ್ಚಿನ ತಾಣ. ನಿತ್ಯ ದೇಶ ವಿದೇಶದಿಂದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಎಂಜಾಯ್ ಮಾಡುತ್ತಾರೆ. ಇದೀಗ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಅನುಭವ ಪಡೆಯುವಂತೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣವಾಗಿದ್ದು, ಕಾರವಾರ ತಾಲೂಕಿನ ಬಿಣಗಾದಿಂದ ಕಾರವಾರ ನಗರದ ವರಗೆ ನಾಲ್ಕು ಸುರಂಗ ಮಾರ್ಗಗಳನ್ನು ಕೊರೆಯಲಾಗಿದೆ. ಸುಮಾರು ಏಳೆಂಟು ವರ್ಷಗಳಿಂದ ಕಾಮಗಾರಿ ಮಾಡಿ ಕೊನೆಗೂ ಹೆದ್ದಾರಿಯಲ್ಲಿ ಸುರಂಗ ಮಾರ್ಗದ ಮೂಲಕ ಜನರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ :ದಶಕಗಳ ಸಮಸ್ಯೆಗೆ ಪರಿಹಾರ : ಬೈತಖೋಲ ಬಂದರು ಹೂಳೆತ್ತುವ ಕಾಮಗಾರಿಗೆ ಚಾಲನೆ
ಈ ಹಿಂದೆ ಬಿಣಗಾದಿಂದ ಕಾರವಾರಕ್ಕೆ ಬರಬೇಕಾದರೆ ಸುಮಾರು 4 ಕಿಲೋ ಮೀಟರ್ ಸಂಚರಿಸಿ ಬರಬೇಕಾಗಿತ್ತು. ಆದರೆ, ಸುರಂಗ ಮಾರ್ಗದ ನಿರ್ಮಾಣದಿಂದ ಕೇವಲ 1 ಕಿಲೋ ಮೀಟರ್ ಸಂಚರಿಸಿದರೆ ಕಾರವಾರ ನಗರ ಪ್ರವೇಶ ತಲುಪುವಂತಾಗಿದ್ದು, ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದು ಖುಷಿ ಪಡುವಂತಾಗಿದೆ.