ಕರ್ನಾಟಕ

karnataka

ETV Bharat / state

ಕಾರ್ಮಿಕರಿಗೆ ಸಂಬಳ ನೀಡದ ಕಂಪನಿ: ಕಾರವಾರದಲ್ಲಿ ವಲಸೆ ಕಾರ್ಮಿಕರು ಅತಂತ್ರ - karwar migrant labours

ವಿಶ್ವ ಕಾರ್ಮಿಕ ದಿನಾಚರಣೆ ಬೆನ್ನಲ್ಲೆ ಹೊರ ರಾಜ್ಯಗಳಿಂದ ಹೊಟ್ಟೆಪಾಡಿಗಾಗಿ ಬಂದು ಇದೀಗ ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಸ್ಥಿತಿ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

karwar migrant labours salary issues
ವಲಸೆ ಕಾರ್ಮಿಕರು ಅತಂತ್ರ

By

Published : May 2, 2020, 12:36 PM IST

Updated : May 2, 2020, 1:44 PM IST

ಕಾರವಾರ:ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯದ ಕಾರ್ಮಿಕರು ಕಳೆದ ಕೆಲ ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ರಾಷ್ಟ್ರೀಯ ಹೆದ್ದಾರಿ 66 ಅಭಿವೃದ್ಧಿ ಕಾಮಗಾರಿಯನ್ನು ಐಆರ್​ಬಿ ಕಂಪೆನಿ ಗುತ್ತಿಗೆ ಪಡೆದಿತ್ತು. ಬಿಹಾರ್, ಜಾರ್ಖಂಡ್ ಸೇರಿದಂತೆ ಇನ್ನಿತರ ಭಾಗಗಳಿಂದ ಸಾವಿರಾರು ಕಾರ್ಮಿಕರನ್ನು ಕೆಲಸಕ್ಕೆ ಕರೆತಂದಿತ್ತು. ಆದರೆ ಕೆಲಸ ಮಾಡಿಸಿಕೊಂಡ ಕಂಪನಿ ಸಂಬಳ ನೀಡಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ವಲಸೆ ಕಾರ್ಮಿಕರು ಅತಂತ್ರ

ಇದೀಗ ಕಟ್ಟಡ , ರಸ್ತೆ ಕಾಮಗಾರಿ ನಡೆಸಲು ಸರ್ಕಾರ ಒಪ್ಪಿಗೆ ನೀಡಿದೆ. ಅದರಂತೆ ಗುತ್ತೆಗೆದಾರರು ಕೂಡ ಕಾರ್ಮಿಕರಿಗೆ ಕೆಲಸಕ್ಕೆ ತೆರಳಲು ಸೂಚಿಸಿದ್ದಾರೆ. ಆದರೆ ಕಳೆದ ಕೆಲ ತಿಂಗಳಿಂದ ಕಾರ್ಮಿಕರಿಗೆ ಸಂಬಳ ನೀಡಿಲ್ಲ ಎನ್ನಲಾಗ್ತಿದೆ. ಸುಮಾರು 600 ಕ್ಕೂ ಹೆಚ್ಚು ಕಾರ್ಮಿಕರಿದ್ದು, ಬಾಕಿ ಇರುವ ಸಂಬಂ ನೀಡಿ ಎಂದು ಕೇಳಿದ್ದೇವೆ. ಮೊದಲು ಕೆಲಸಕ್ಕೆ ತೆರಳಿ, ಇಲ್ಲದೇ ಇದ್ದಲ್ಲಿ ಊಟ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎನ್ನುತ್ತಾರೆ ಕಾರ್ಮಿಕರು.

ಈ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಕಾಮಗಾರಿ ನಡೆಯುತ್ತಿರುವ ಫ್ಲೆ ಓವರ್ ಕೆಳಗೆ ಉಳಿದುಕೊಂಡಿದ್ದಾರೆ. ಸಂಬಳ ನೀಡಿ ಇಲ್ಲವೆ ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂಬುದು ಕಾರ್ಮಿಕರ ಒತ್ತಾಯಿಸಿದ್ದಾರೆ.

Last Updated : May 2, 2020, 1:44 PM IST

ABOUT THE AUTHOR

...view details