ಕಾರವಾರ: ಕಾಡಿನ ಮಧ್ಯೆ ಕೆಟ್ಟು ನಿಂತಿದ್ದ ಕೆಎಸ್ಆರ್ಟಿಸಿ ಬಸ್ ಸರಿಪಡಿಸಲು ಯಾವೊಬ್ಬ ತಾಂತ್ರಿಕ ಸಿಬ್ಬಂದಿ ಕಳುಹಿಸದ ಮೇಲಧಿಕಾರಿಗಳ ಧೋರಣೆ ವಿರೋಧಿಸಿ ಮಹಿಳಾ ಕಂಡಕ್ಟರ್ ತಮ್ಮ ಅಸಹಾಯಕತೆ ತೋಡಿಕೊಂಡರು. ಈ ಕುರಿತು ಕಂಡಕ್ಟರ್ ಮಾಡಿರುವ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಡಿನಲ್ಲಿ ಕೆಟ್ಟು ನಿಂತ ಬಸ್: ವಿಡಿಯೋ ಮೂಲಕ ಮಹಿಳಾ ಕಂಡಕ್ಟರ್ ಅಳಲು
ಕಾಡಿನ ಮಧ್ಯೆ ಕೆಟ್ಟು ನಿಂತಿದ್ದ ಕೆಎಸ್ಆರ್ಟಿಸಿ ಬಸ್ ಸರಿಪಡಿಸಲು ಮೇಲಧಿಕಾರಿಗಳು ತಾಂತ್ರಿಕ ಸಿಬ್ಬಂದಿ ಕಳುಹಿಸಿಕೊಟ್ಟಿಲ್ಲ ಎಂದು ಮಹಿಳಾ ಕಂಡಕ್ಟರ್ ತಮ್ಮ ಅಸಹಾಯಕತೆಯನ್ನು ವಿಡಿಯೋ ಮೂಲಕ ತೋಡಿಕೊಂಡಿದ್ದಾರೆ.
ಹಳಿಯಾಳ ಘಟಕದ ಬಸ್ ಮಾರ್ಗ ಮಧ್ಯೆ ಪಂಕ್ಚರ್ ಆಗಿ ನಿಂತಿದ್ದು, ಡಿಪೋ ಮ್ಯಾನೇಜರ್ ಒಂದು ಚಕ್ರ ಮಾತ್ರ ಕಳುಹಿಸಿದ್ದಾರೆ. ಆದರೆ ಬಸ್ನಲ್ಲಿದ್ದ ಟೂಲ್ ಬಾಕ್ಸ್ ತೆಗೆಯಲು ಆಗುತ್ತಿಲ್ಲ. ಬೇರೆ ಯಾವುದೇ ಟೂಲ್ ಬಾಕ್ಸ್ ಆಗಲೀ ಅಥವಾ ಮೆಕ್ಯಾನಿಕ್ ಆಗಲೀ ಕಳುಹಿಸಿಕೊಟ್ಟಿಲ್ಲ. ಕಾಡಿನ ಮಧ್ಯೆ ನಾನು ಒಬ್ಬಳೇ ಇದ್ದು ನನಗೇನಾದರೂ ಆದಲ್ಲಿ ಅದಕ್ಕೆ ಡಿಪೋ ಮ್ಯಾನೇಜರ್ ಹೊಣೆಗಾರರು ಎಂದು ಸೆಲ್ಫಿ ವಿಡಿಯೋದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮ್ಯಾನೇಜರ್ಗೆ ತಿಳಿಸಿದಾಗ ಮತ್ತೆ ಯಲ್ಲಾಪುರಕ್ಕೆ ತೆರಳಿ ಮೆಕ್ಯಾನಿಕ್ ಕರೆದುಕೊಂಡು ಬರುವಂತೆ ತಿಳಿಸಿದ್ದು ಬಸ್ ಪರಿಶೀಲಿಸದೇ ಕಳುಹಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.