ಕರ್ನಾಟಕ

karnataka

ETV Bharat / state

ಕಾರವಾರ : 5 ವರ್ಷದ ಬಾಲಕನ ಹುಬ್ಬೇರಿಸುವ ಸಾಧನೆ - ಕಾರವಾರ ಜಿಲ್ಲೆಯಲ್ಲಿ 5 ವರ್ಷದ ಬಾಲಕನಿಂದ ಸಾಧನೆ

ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಮಗ ಇಂತಹ ಸಾಧನೆ ಮಾಡಿರುವುದು ಪಾಲಕರಿಗೂ ಹೆಮ್ಮೆ ಮೂಡಿಸಿದೆ. ಮಗನಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸುವುದಾಗಿ ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

Karwar district 5 years boy made International Book of Records
5 ವರ್ಷದ ಬಾಲಕನ ಹುಬ್ಬೇರಿಸುವ ಸಾಧನೆ

By

Published : Aug 20, 2021, 4:32 PM IST

Updated : Aug 20, 2021, 7:09 PM IST

ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ನಾಲ್ಕೂವರೆ ವರ್ಷದ ಪುಟಾಣಿ ಸಂಪ್ರೀತ್, ಇದೀಗ ತನ್ನ ವಿನೂತನ ವೈಶಿಷ್ಟ್ಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಪುಟಾಣಿ ಸಂಪ್ರೀತ್

ಪಟ್ಟಣದ ಹೊಸ ಹೆರವಟ್ಟಾದ ಸಂತೋಷ ನಾಯ್ಕ್​​​ ಹಾಗೂ ಅನಿತಾ ನಾಯ್ಕ್​​ ದಂಪತಿಯ ಪುತ್ರ ಸಂಪ್ರೀತ್​​ ನಾಯ್ಕ್​​​ ಬರೋಬ್ಬರಿ 195 ರಾಷ್ಟ್ರಗಳ ಧ್ವಜವನ್ನು ಗುರುತಿಸುವುದಲ್ಲದೆ, ನೋಡದೆಯೂ ಅವುಗಳ ಹೆಸರನ್ನು ಹೇಳುವ ಮೂಲಕ ಎಲ್ಲರ ಹುಬ್ಬೇರಿಸುತ್ತಿದ್ದಾನೆ.

ಪೋಷಕರೊಂದಿಗೆ ಸಂಪ್ರೀತ್

118 ಆವರ್ತಕ ಕೋಷ್ಟಕದ ಹೆಸರನ್ನು 55 ಸೆಕೆಂಡ್‌ಗಳಲ್ಲಿ ಹೇಳಿರುವ ಈತನ ಚಾಣಾಕ್ಷತನ ಹಾಗೂ ಜ್ಞಾನ ಶಕ್ತಿಯನ್ನು ಪರಿಗಣಿಸಿ ವರ್ಲ್ಡ್‌ ರೆಕಾರ್ಡ್ಸ್ ಆಫ್ ಎಕ್ಸಲೆನ್ಸ್ ಈತನ ಹೆಸರನ್ನು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಿ ಪ್ರಮಾಣಪತ್ರ ನೀಡಿದೆ. ಬಾಲಕನ ಈ ಸಾಧನೆ ಕುಮಟಾ ತಾಲೂಕು ಮಾತ್ರವಲ್ಲದೆ ಇಡೀ ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದೆ.

ಬಾಲಕ ಸಂಪ್ರೀತ್​​ ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಆರ್‌ಪಿಎಸ್ ಹೆಚ್ ಬಾಲ ಮಂದಿರದಲ್ಲಿ ಎಲ್ ಕೆ ಜಿ ಓದುತ್ತಿದ್ದಾನೆ. 195 ರಾಷ್ಟ್ರಗಳ ಧ್ವಜಗಳನ್ನು ಗುರುತಿಸುವುದು ಮತ್ತು ನೋಡದೆ ಹೇಳುವುದು, 118 ಆವರ್ತಕ ಕೋಷ್ಟಕದ ಹೆಸರು, ಎಲ್ಲಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ಗ್ರಹಗಳು, ಋತುಗಳು, ಮಾಸಗಳು, 20 ರಾಷ್ಟ್ರ ಕವಿಗಳ ಬಿರುದು ಹಾಗೂ ಭಾರತದ ರಾಷ್ಟ್ರಪತಿಗಳ ಹೆಸರನ್ನು ಈತ ಹೇಳುತ್ತಾನೆ.

ಜೊತೆಗೆ 1 ರಿಂದ 100ರವರೆಗೆ ಅಂಕಿಗಳನ್ನು ಬರೆಯುವುದು, ರಾಷ್ಟ್ರಗೀತೆ, ನಾಡಗೀತೆ, A ದಿಂದ Zವರೆಗಿನ ಇಂಗ್ಲಿಷ್ ವರ್ಣಮಾಲೆಯ ಸ್ಪೆಲ್ಲಿಂಗ್, 1 ರಿಂದ 5ರವರೆಗಿನ ಮಗ್ಗಿಗಳು ಸೇರಿದಂತೆ ರಾಷ್ಟ್ರೀಯ ಚಿಹ್ನೆಗಳ ಹೆಸರನ್ನು ಹೇಳುವ ಜ್ಞಾನವನ್ನೂ ಈ ಬಾಲಕ ಹೊಂದಿದ್ದಾನೆ.

ಪುಟಾಣಿ ಸಂಪ್ರೀತ್

ಇನ್ನು, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಮಗ ಇಂತಹ ಸಾಧನೆ ಮಾಡಿರುವುದು ಪಾಲಕರಿಗೂ ಹೆಮ್ಮೆ ಮೂಡಿಸಿದೆ. ಮಗನಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸುವುದಾಗಿ ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓದಿ: ತುಮಕೂರು ಜಿಲ್ಲೆಯ ಗಡಿಭಾಗದ ಜನರಿಗೆ ದರೋಡೆಕೋರರ ಭಯ..

Last Updated : Aug 20, 2021, 7:09 PM IST

ABOUT THE AUTHOR

...view details