ಕಾರವಾರ: ನಗರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಜನವರಿ 23 ರಿಂದ 4 ದಿನಗಳ ಕಾಲ ಕರುನಾಡು ಕರಾವಳಿ ಉತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಎನ್. ದತ್ತಾ ತಿಳಿಸಿದ್ದಾರೆ.
ಜನವರಿ 23 ರಿಂದ ಕರುನಾಡ ಕರಾವಳಿ ಉತ್ಸವ: ಎನ್. ದತ್ತಾ - Karunada coastal festival
ಕಾರವಾರ ನಗರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಜನವರಿ 23 ರಿಂದ 4 ದಿನಗಳ ಕಾಲ ಕರುನಾಡು ಕರಾವಳಿ ಉತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಎನ್. ದತ್ತಾ ತಿಳಿಸಿದ್ದಾರೆ.
![ಜನವರಿ 23 ರಿಂದ ಕರುನಾಡ ಕರಾವಳಿ ಉತ್ಸವ: ಎನ್. ದತ್ತಾ ಜ.23 ರಿಂದ ಕರುನಾಡ ಕರಾವಳಿ ಉತ್ಸವ](https://etvbharatimages.akamaized.net/etvbharat/prod-images/768-512-5744546-thumbnail-3x2-lek.jpg)
Karunada coastal festival
ಎನ್. ದತ್ತಾ ನೇತೃತ್ವದಲ್ಲಿ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಕರುನಾಡು ಕರಾವಳಿ ಉತ್ಸವದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಜನವರಿ 23 ರಿಂದ 26 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕು ದಿನವೂ ವಿಭಿನ್ನ ಹಾಗೂ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಉತ್ಸವಕ್ಕೆ ಸ್ಟಾರ್ ಕಲಾವಿದರು ಆಗಮಿಸಲಿದ್ದು, ಮಕ್ಕಳು ಹಾಗೂ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗುತ್ತಿದೆ. ಜತೆಗೆ ಕಡಲತೀರ ಉಳಿಸುವ ಸಂಬಂಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.