ಕಾರವಾರ :ಬೆಳೆದ ತರಕಾರಿಯನ್ನು ಮಾರಾಟ ಮಾಡಲು ನಗರಸಭೆ ಅವಕಾಶ ಕೊಡದ ಹಿನ್ನೆಲೆ ರಸ್ತೆಯಲ್ಲಿಯೇ ನಿಂತು ರೈತರು ಪರದಾಟ ನಡೆಸುತ್ತಿರುವ ಘಟನೆ ಕಾರವಾರ ನಗರದಲ್ಲಿ ನಡೆದಿದೆ.
ಕೊರೊನಾ ಹಿನ್ನೆಲೆ ತರಕಾರಿ ಮಾರಾಟಕ್ಕೆ ನಿರಾಕರಣೆ, ರಸ್ತೆಯಲ್ಲಿ ಪರದಾಡಿದ ರೈತರು - ಕಾರವಾರ ನಗರಸಭೆ
ಕೊರೊನಾ ಸಂದರ್ಭದಲ್ಲಿ ನಾವು ಸಂಕಷ್ಟದಲ್ಲಿದ್ದು, ಹಣ ಖರ್ಚು ಮಾಡಿ ಮಾರಾಟ ಮಾಡಲು ಬಂದಿದ್ದೇವೆ. ದಯವಿಟ್ಟು ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ..
ಭಾನುವಾರದ ಸಂತೆ ಇರೋದ್ರಿಂದ ಜಿಲ್ಲೆಯ ವಿವಿಧ ಭಾಗ ಹಾಗೂ ಹೊರ ಜಿಲ್ಲೆಗಳಿಂದ ತರಕಾರಿಗಳನ್ನು ತೆಗೆದುಕೊಂಡು ನಗರದಲ್ಲಿ ಮಾರಾಟ ಮಾಡಲು ರೈತರು ಆಗಮಿಸಿದ್ದರು. ಆದರೆ, ಕೊರೊನಾ ಹಿನ್ನೆಲೆ ತರಕಾರಿ ಮಾರಾಟ ಮಾಡಲು ಅವಕಾಶ ಕೊಡುವುದಿಲ್ಲ ಎಂದು ನಗರಸಭೆ ಸಿಬ್ಬಂದಿ ಹೇಳಿದ್ದು, ಎಲ್ಲೂ ಕುಳಿತು ತರಕಾರಿ ಮಾರಾಟ ಮಾಡಲು ಬಿಡುತ್ತಿಲ್ಲ.
ಇದರಿಂದ ತರಕಾರಿ ಹಿಡಿದು ರಸ್ತೆಯಲ್ಲಿ ತಿರುಗಾಟ ನಡೆಸುತ್ತಾ ನಗರಸಭೆ ವಿರುದ್ಧ ರೈತರು ಹಿಡಿಶಾಪ ಹಾಕಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಾವು ಸಂಕಷ್ಟದಲ್ಲಿದ್ದು, ಹಣ ಖರ್ಚು ಮಾಡಿ ಮಾರಾಟ ಮಾಡಲು ಬಂದಿದ್ದೇವೆ. ದಯವಿಟ್ಟು ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ರೈತರು, ಮಾರಾಟಗಾರರು ನಗರಸಭೆ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.