ಕಾರವಾರ:ಬದುಕು ಕಲಿಸುವ ಪಾಠ ಭವಿಷ್ಯತ್ತಿಗೆ ದಾರಿ ಅನ್ನೊಹಾಗೆ ಕುಡುಕ ಗಂಡನನ್ನು ಕಳೆದುಕೊಂಡ ಮಹಿಳೆ ಎದೆಗುಂದದೆ ಸಂಸಾರ ಸಾಗಿಸಲು ಚಪಾತಿ ಉದ್ಯಮಿ ಪ್ರಾರಂಭಿಸಿ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ನಗರದ ಮರಿಯಾ ನಗರದ ನಿವಾಸಿ ಸಂಗೀತಾ ರಮಾಕಾಂತ ವರ್ಣೇಕರ್ ಮದುವೆಯಾಗಿ ಶ್ರೀಮಂತ ಕುಟುಂಬವೊಂದರ ಮನೆ ಸೇರಿದ್ದರು, ಸುಂದರ ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಕಾರಣಾಂತರಗಳಿಂದ ಕುಟುಂಬದ ಶ್ರೀಮಂತಿಕೆ ಸಹ ಕಳೆದುಹೋಗಿತ್ತು. ಬಳಿಕ ಕುಟುಂಬದ ನಿರ್ವಹಣೆ ಹೊರಬೇಕಿದ್ದ ಗಂಡ ಕೂಡ ವಿಪರಿತ ಕುಡಿತದ ಚಟಕ್ಕೆ ಬಲಿಯಾಗಿದ್ದ.
ಚಪಾತಿ ಉದ್ಯಮ ಪ್ರಾರಂಭಿಸಿ ಬದುಕು ಕಟ್ಟಿದ ಮಹಿಳೆ ಮಾದರಿ ಇದರಿಂದ ಎದೆಗುಂದದೆ ಸಂಸಾರ ಸಾಗಿಸಲು ಚಪಾತಿ ಮಾಡಿ ಮಾರಟ ಮಾಡಲು ಪ್ರಾರಂಭಿಸಿ 50 ಚಪಾತಿಗೆ ಪ್ರಾರಂಭ ಮಾಡಿ ಇಂದು 300 ಕ್ಕೂ ಹೆಚ್ಚು ಚಪಾತಿಗಳನ್ನು ಮಾರಟಮಾಡಿ ಬದುಕು ಸಾಗಿಸುತ್ತಿದ್ದಾರೆ. ಅಲ್ಲದೆ ಮದುವೆ, ಕಾರ್ಯಕ್ರಮ ಸೇರಿದಂತೆ ಇನ್ನಿತರ ಸಮಯದಲ್ಲಿ ತಿಳಿಸುವವರಿಗೆ ಕಡಿಮೆ ದರದಲ್ಲಿ ನೀಡುತ್ತೇವೆ ಎನ್ನುತ್ತಾರೆ ಶ್ರಮಜೀವಿ ಮಹಿಳೆ.
ಕಡಿಮೆ ದರದಲ್ಲಿ ರುಚಿಯಾದ ಚಪಾತಿ ಸಿಗುವುದರಿಂದ ಇದೀಗ ಹೆಚ್ಚು ಹೆಚ್ಚು ಆರ್ಡರ್ ಬರುತ್ತಿದೆ. ಚಿಕ್ಕಂದಿನಿಂದಲೂ ತುಂಬಾ ಶ್ರಮವಹಿಸಿರುವ ಅಮ್ಮನ ಚಪಾತಿ ಉದ್ಯಮ ಇದೀಗ ಉತ್ತಮವಾಗಿ ನಡೆಯುತ್ತಿದೆ. ವಿಪರೀತ ಕುಡಿತ್ತಿದ್ದ ಅಪ್ಪ ಎರಡು ವರ್ಷದ ಹಿಂದೆ ನೀಧನರಾಗಿದ್ದು, ಇದೀಗ ಅಮ್ಮನ ದುಡಿಮೆಗೆ ನಾನು ನೆರವಾಗುತ್ತಿದ್ದೇನೆ ಎನ್ನುತ್ತಾರೆ ಈಕೆಯ ಮಗ.
ಒಟ್ಟಿನಲ್ಲಿ ಕಷ್ಟಗಳು ಬಂದಾಗ ಕಣ್ಣೀರು ಹಾಕುತ್ತ ಕುಳ್ಳುವ ಅದೆಷ್ಟೋ ಜನಗಳ ಮಧ್ಯೆ ಮಹಿಳೆಯೂ ಎದೆಗುಂದದೆ ಚಪಾತಿ ತಯಾರಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಂಡಿರುವುದು ಮಾದರಿಯೇ ಸರಿ.