ಕರ್ನಾಟಕ

karnataka

ETV Bharat / state

ಅಗತ್ಯ ವಸ್ತುಗಳನ್ನು ಮನೆಯ ಬಳಿಯೇ ಖರೀದಿಸಿ: ಕಾರವಾರ ಪೊಲೀಸರ ಕ್ರಮ

ಲಾಕ್​ಡೌನ್​ ಜಾರಿಯಲ್ಲಿದ್ದರೂ ಕಾರವಾರದಲ್ಲಿ ಜನರ ಅನಗತ್ಯ ಓಡಾಟ ಹೆಚ್ಚಾಗಿದ್ದು, ಸಿಪಿಐ ಸಂತೋಷ ಶೆಟ್ಟಿ ಸೇರಿದಂತೆ ಪೊಲೀಸರು ಅನಗತ್ಯವಾಗಿ ಓಡಾಡುವವರನ್ನು ತಡೆದು ವಾಪಸ್​ ಕಳುಹಿಸಿದ್ದಾರೆ.

karawara police strict action on lock down
ಕಾರವಾರ ಪೊಲೀಸರ ಕಟ್ಟೆಚ್ಚರ

By

Published : May 23, 2021, 12:38 PM IST

ಕಾರವಾರ:ಕೋವಿಡ್ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿ ಮಾಡಿದ್ದ ವೀಕೆಂಡ್ ಲಾಕ್​ಡೌನ್​​​ ನಡುವೆಯೂ ಕಾರವಾರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಕಾರವಾರ ಪೊಲೀಸರ ಕಟ್ಟೆಚ್ಚರ

ವೀಕೆಂಡ್ ಲಾಕ್‌ಡೌನ್ ಎರಡನೇಯ ದಿನ ಕಾರವಾರದ ವಿವಿಧೆಡೆ ಹಾಲು, ಮೊಟ್ಟೆ, ಮಾಂಸ ಖರೀದಿಗೆಂದು ತಿರುಗುವ ಕೆಲವರನ್ನು ಪೊಲೀಸರು ಹಿಂದಕ್ಕೆ​​​ ಕಳುಹಿಸಿದ್ದಾರೆ.

ಇದನ್ನೂ ಓದಿ:ಹೂವಿನಹಡಗಲಿಯಲ್ಲಿ 3 ಬ್ಲಾಕ್​ ಫಂಗಸ್ ಪ್ರಕರಣ ಪತ್ತೆ!

ಭಾನುವಾರವಾದ ಕಾರಣ ಮೊಟ್ಟೆ, ಮೀನು, ಚಿಕನ್ ಖರೀದಿಗೆ ಜನರ ಓಡಾಟ ಹೆಚ್ಚಾಗಿತ್ತು. 10 ಗಂಟೆಯಾದರೂ ಓಡಾಟ ನಡೆಸುತ್ತಿದ್ದ ಕಾರಣ, ಸಿಪಿಐ ಸಂತೋಷ ಶೆಟ್ಟಿ ರಸ್ತೆಗಿಳಿದು ಅನಗತ್ಯವಾಗಿ ತಿರುಗಾಡುವವರಿಗೆ ಮನೆಯ ಬಳಿಯೇ ಅಗತ್ಯ ವಸ್ತುಗಳು ಬರುವುದು, ಅಲ್ಲಿಯೇ ಖರೀದಿಸುವಂತೆ ಹೇಳಿ ಕಳುಹಿಸಿದ್ದಾರೆ.

ABOUT THE AUTHOR

...view details