ಕಾರವಾರ: ಪರವಾನಗಿ ಇಲ್ಲದೆ ಬೊಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 9 ಜಾನುವಾರುಗಳನ್ನು ರಕ್ಷಿಸಿ, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಹೊನ್ನಾವರ ತಾಲೂಕಿನ ಶೇಡಿಮುಲೆ ಕ್ರಾಸ್ ಬಳಿ ನಡೆದಿದೆ.
ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಸಂಚರಿಸುತ್ತಿದ್ದ ಬೊಲೆರೋ ವಾಹನದಲ್ಲಿ 3 ಹಸು, 4 ಹೋರಿ ಹಾಗೂ 2 ಕೋಣ ಸೇರಿ 9 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು.