ಕರ್ನಾಟಕ

karnataka

ETV Bharat / state

ಮಹಿಳೆ ಹೊಟ್ಟೆಯಲ್ಲಿ 4 ಕೆಜಿ ಪೈಬ್ರೈಡ್ ಗಡ್ಡೆ... ಆಪರೇಷನ್ ಸಕ್ಸಸ್

ಕ್ರೀಮ್ಸ್ ಮೆಡಿಕಲ್ ಕಾಲೇಜಿನ ವೈದ್ಯರ ತಂಡವು ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 4 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದೆ.

4-kg-tumour
4-kg-tumour

By

Published : Oct 10, 2021, 2:14 AM IST

ಕಾರವಾರ:ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 4 ಕೆ.ಜಿ ತೂಕದ ಗಡ್ಡೆಯನ್ನು ಕ್ರೀಮ್ಸ್ ಮೆಡಿಕಲ್ ಕಾಲೇಜಿನ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು, ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.

ಕುಮಟಾ ಮೂಲದ ಮೀನುಗಾರ ಮಹಿಳೆಗೆ ಕಳೆದ 10 ತಿಂಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆ ಬಳಿಕ ಆಸ್ಪತ್ರೆಗೆ ತೋರಿಸಿದ್ದು, ಹೊಟ್ಟೆಯಲ್ಲಿ ಪೈಬ್ರೈಡ್ ಗಡ್ಡೆ ಬೆಳೆದಿರುವುದು ಪತ್ತೆಯಾಗಿತ್ತು. ಆದರೆ ಥೈರೈಡ್ ಹಾಗೂ ರಕ್ತ ಹೀನತೆ ಸಮಸ್ಯೆ ಇರುವುದರಿಂದ ಶಸ್ತ್ರಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ತೋರಿಸುವಂತೆ ಸೂಚಿಸಿದ್ದರು. ಗಂಡನನ್ನು ಕಳೆದುಕೊಂಡ ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಮಹಿಳೆ ಕೊನೆಗೆ ಕುಟುಂಬಸ್ಥರ ಸಹಕಾರದೊಂದಿಗೆ ಕಾರವಾರದ ಕ್ರೀಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಹಾಗೂ ಕ್ರೀಮ್ಸ್ ಅಧೀಕ್ಷಕ ಶಿವಾನಂದ ಕುಡ್ತಲ್ಕರ್ ಬಳಿ ತೋರಿಸಿದ್ದರು.

ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸುವ ಬಗ್ಗೆ ತಿಳಿಸಿದ್ದರು. ಅದರಂತೆ ಡಾ.ಸ್ಪಂದನಾ, ಡಾ.ಪರೇಶ, ಡಾ.ಕಿಶನ್, ಡಾ. ಐಶ್ವರ್ಯ, ಶುಶ್ರೂಷಕಿ ಮೇಘಾ ಅವರನ್ನೊಳಗೊಂಡ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರಗೆ ತೆಗೆದಿದೆ.

ಶಸ್ತ್ರ ಚಿಕಿತ್ಸೆ ಮೂಲಕ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ABOUT THE AUTHOR

...view details