ಕರ್ನಾಟಕ

karnataka

ETV Bharat / state

ಕಾರವಾರದ ನೆರೆ ಸಂತ್ರಸ್ತರಿಗೆ ಸಿಗಲಿಲ್ಲ ಸೌಲಭ್ಯ.. ರಸ್ತೆ ತಡೆದು ದಿಢೀರ್ ಪ್ರತಿಭಟನೆ! - ನೆರೆಸಂತ್ರಸ್ತರಿಗೆ ಅವಶ್ಯಕ ಮೂಲಭೂತ ಸೌಕರ್ಯ

ನೆರೆ ಸಂತ್ರಸ್ತರಿಗೆ ಅವಶ್ಯಕ ಮೂಲಸೌಕರ್ಯವನ್ನ ಒದಗಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ಕಾರವಾರ ತಾಲೂಕಿನ ಕಿನ್ನರ ಗ್ರಾ.ಪಂ ವ್ಯಾಪ್ತಿಯ ಪರಿಹಾರ ಕೇಂದ್ರದ ಬಳಿ ರಸ್ತೆ ತಡೆದು ಸಂತ್ರಸ್ತರು ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ನಿನ್ನೆ ನಡೆದಿದೆ.

ಕಾರವಾರದ ನೆರೆಸಂತ್ರಸ್ತರಿಗೆ ಸಿಗಲಿಲ್ಲ ಸೌಲಭ್ಯ; ರಸ್ತೆ ತಡೆದು ದಿಢೀರ್ ಪ್ರತಿಭಟನೆ

By

Published : Aug 11, 2019, 1:21 PM IST

ಕಾರವಾರ:ನೆರೆ ಸಂತ್ರಸ್ತರಿಗೆ ಅವಶ್ಯಕ ಮೂಲಸೌಕರ್ಯವನ್ನ ಒದಗಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕಿನ್ನರ ಗ್ರಾ.ಪಂ ವ್ಯಾಪ್ತಿಯ ಪರಿಹಾರ ಕೇಂದ್ರದ ಬಳಿ ರಸ್ತೆ ತಡೆದು ಸಂತ್ರಸ್ತರು ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ನಿನ್ನೆ ನಡೆದಿದೆ.

ಕಾರವಾರದ ನೆರೆಸಂತ್ರಸ್ತರಿಗೆ ಸಿಗಲಿಲ್ಲ ಸೌಲಭ್ಯ.. ರಸ್ತೆ ತಡೆದು ದಿಢೀರ್ ಪ್ರತಿಭಟನೆ

ಕಿನ್ನರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 400 ಮನೆಗಳು ಮುಳುಗಿದ್ದು, ಎರಡು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಈ ಕೇಂದ್ರಗಳಲ್ಲಿ ಇರುವ ಸಂತ್ರಸ್ತರಿಗೆ ಅವಶ್ಯಕವಿರುವ ಬಟ್ಟೆ, ಬೆಡ್‌ಶೀಟ್ ಸಮರ್ಪಕವಾಗಿ ಸಿಗುತ್ತಿಲ್ಲ. ಅಧಿಕಾರಿಗಳು ಅವಶ್ಯಕವಿರುವ‌‌‌ಷ್ಟು ಬೆಡ್‌ಶೀಟ್ ಕಳುಹಿಸಿಕೊಡುವುದಾಗಿ ಅರ್ಧದಷ್ಟನ್ನು ಮಾತ್ರ ಕಳುಹಿಸಿದ್ದಾರೆ. ಬೇರೆ ಇತರ ಯಾವುದೇ ವಸ್ತುಗಳು ಜನರಿಗೆ ಸಿಗುತ್ತಿಲ್ಲ. ಇದರಿಂದ ಇಲ್ಲಿನ ಸಂತ್ರಸ್ತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಧಿಕಾರಿಗಳು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಪಟ್ಟು ಬಿಡಲಿಲ್ಲ. ಕೊನೆಗೆ ಅವಶ್ಯಕ ಸಾಮಗ್ರಿಗಳನ್ನು ತರಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.

ABOUT THE AUTHOR

...view details