ಕರ್ನಾಟಕ

karnataka

ETV Bharat / state

ನೇತ್ರಾಣಿಯಲ್ಲಿ ಸ್ಕೂಬಾ ಡೈವ್ ಮಾಡಿ ಕಡಲಾಳದ ಜಗತ್ತಿನ ಅನುಭವ ಪಡೆದ ನಟ ದಿಗಂತ್ - ಮುರುಡೇಶ್ವರಕ್ಕೆ ಸ್ಯಾಂಡಲ್‌ವುಡ್‌ ನಟ ದಿಗಂತ್ ಭೇಟಿ

ನಟ ದಿಗಂತ್, ಭಟ್ಕಳ ತಾಲೂಕಿನ ಮುರುಡೇಶ್ವರ ಸಮೀಪದ ನೇತ್ರಾಣಿಯಲ್ಲಿ ಸ್ಕೂಬಾ ಡೈವ್ ಮಾಡಿ ಕಡಲಾಳದ ಜಗತ್ತಿನ ಅನುಭವ ಪಡೆದರು. ನೇತ್ರಾಣಿ ಅಡ್ವೆಂಚರ್ಸ್‌ನ ಗಣೇಶ ಹರಿಕಂತ್ರ ಮತ್ತು ಅವರ ತಂಡ ಮಾರ್ಗದರ್ಶನ ಮಾಡಿತು.

Actor Diganth Scuba Diving At Murudeshwar
ನಟ ದಿಗಂತ್ ಸ್ಕೂಬಾ ಡೈವ್

By

Published : Jan 8, 2022, 6:52 AM IST

ಭಟ್ಕಳ:ತಾಲೂಕಿನ ಜಗದ್ವಿಖ್ಯಾತ ಮುರುಡೇಶ್ವರಕ್ಕೆ ಸ್ಯಾಂಡಲ್‌ವುಡ್‌ ನಟ ದೂದ್‌ಪೇಡ ದಿಗಂತ್ ಭೇಟಿ ನೀಡಿ, ಸಮೀಪದ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ಸುಮಾರು 2 ಗಂಟೆಗಳ ಕಾಲ ಸ್ಕೂಬಾ ಡೈವಿಂಗ್ ಮಾಡಿ ಸಂಭ್ರಮಿಸಿದರು.

ನೇತ್ರಾಣಿಯಲ್ಲಿ ನಟ ದಿಗಂತ್ ಸ್ಕೂಬಾ ಡೈವ್

ತಂದೆ - ತಾಯಿಯ ಜತೆ ಮುರುಡೇಶ್ವರಕ್ಕೆ ಆಗಮಿಸಿದ್ದ ದಿಗಂತ್, ನೇತ್ರಾಣಿ ಅಡ್ವೆಂಚರ್ಸ್‌ನ ಡೈವರ್​​​ಗಳೊಂದಿಗೆ ನೇತ್ರಾಣಿ ನಡುಗಡ್ಡೆಗೆ ತೆರಳಿ ಸ್ಕೂಬಾ ಡೈವಿಂಗ್ ಮಾಡಿದರು. ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ್ ಹರಿಕಂತ್ರ ದಿಗಂತ್ ಕುಟುಂಬಕ್ಕೆ ಸ್ಕೂಬಾ ಡೈವ್ ಮಾಡಲು ಮಾರ್ಗದರ್ಶನ ಮಾಡಿದರು. ಈ ವೇಳೆ, ಕಡಲಾಳದಲ್ಲಿನ ಅಚ್ಚರಿಗಳನ್ನ ಕಣ್ತುಂಬಿಕೊಂಡರು. ಹವಳದ ದಿಬ್ಬಗಳು, ಅಪರೂಪದ, ಬಣ್ಣ ಬಣ್ಣದ ಮೀನುಗಳನ್ನ ನೋಡಿ ಖುಷಿ ಪಟ್ಟರು.

ನೇತ್ರಾಣಿಯಲ್ಲಿ ನಟ ದಿಗಂತ್ ಸ್ಕೂಬಾ ಡೈವ್

ಮಾಲ್ಡೀವ್ಸ್​​​ನಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಅನುಭವ ಹೊಂದಿದ್ದ ದಿಗಂತ್, ಎಸ್‌ಎಸ್‌ಐ ಸರ್ಟಿಫಿಕೇಟ್​​ ಹೊಂದಿದ್ದಾರೆ. ಮೊದಲ ಬಾರಿ ಸುಮಾರು 18 ಮೀ. ಆಳದಲ್ಲಿ 28 ನಿಮಿಷಗಳ ಕಾಲ ದಿಗಂತ್ ಡೈವಿಂಗ್ ಮಾಡಿದರು. ಇದಾದ ನಂತರ 2ನೇ ಬಾರಿ ಮತ್ತೆ 18 ಮೀ. ಆಳದಲ್ಲಿ 53 ನಿಮಿಷಗಳ ಕಾಲ ಡೈವಿಂಗ್ ಮಾಡಿದರು.

ಮುರುಡೇಶ್ವರಕ್ಕೆ ಸ್ಯಾಂಡಲ್‌ವುಡ್‌ ನಟ ದಿಗಂತ್ ಭೇಟಿ

ಸ್ಕೂಬಾ ಡೈವಿಂಗ್‌ನ ಬಳಿಕ ನೇತ್ರಾಣಿ ಅಡ್ವೆಂಚರ್ಸ್‌ಗಳೊಂದಿಗೆ ಮಾತನಾಡಿದ ದಿಗಂತ್, ಸ್ಕೂಬಾ ಡೈವಿಂಗ್ ಮಾಡಿದ ಬಗ್ಗೆ ಖುಷಿಯನ್ನ ಹಂಚಿಕೊಂಡರು. ಅಲ್ಲದೇ ಫೆಬ್ರವರಿಯಲ್ಲಿ ಮತ್ತೆ ಆಗಮಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ನಾಳೆ ಯಶ್ ಜನ್ಮದಿನ: KGF 2 ಚಿತ್ರತಂಡದಿಂದ ಬಿಗ್ ಅನೌನ್ಸ್​ಮೆಂಟ್​

ABOUT THE AUTHOR

...view details