ಕರ್ನಾಟಕ

karnataka

ETV Bharat / state

ಕಾಳಿನದಿ ಒಳ ಹರಿವು ಹೆಚ್ಚಳ.. ಮುನ್ನೆಚ್ಚರಿಕೆ ನೀಡಿದ ಅಧಿಕಾರಿಗಳು

ಇದೇ ರೀತಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರೆದ್ರೆ ಕದ್ರಾ ಜಲಾಶಯವು 32.50 ಮೀಟರ್ ಮಟ್ಟವನ್ನು ಶೀಘ್ರವೇ ತಲುಪುವ ಸಾಧ್ಯತೆ ಇರುತ್ತದೆ.

Kadra dam
Kadra dam

By

Published : Jun 17, 2020, 3:26 PM IST

ಕಾರವಾರ :ಕಾಳಿನದಿ ಯೋಜನೆ 2ನೇ ಹಂತದ ಕದ್ರಾ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಜಲಾಶಯದ ಒಳ ಹರಿವು ಹೆಚ್ಚಾಗಿ ಕಾಳಿ ನದಿಯಂಚಿನ ಜನರಿಗೆ ಅಧಿಕಾರಿಗಳು 2ನೇ ಹಂತದ ಎಚ್ಚರಿಕೆ ನೀಡಲಾಗಿದೆ.

ಕದ್ರಾ ಜಲಾಶಯದ ಗರಿಷ್ಟ ಮಟ್ಟವು 34.50 ಮೀಟರ್‌ಳಾಗಿದೆ. ಇಂದಿನ ಜಲಾಶಯದ ಮಟ್ಟ 29.80 ಮೀಟರ್‌ಗಳಿರುತ್ತದೆ. ಇದೇ ರೀತಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರೆದ ಪಕ್ಷದಲ್ಲಿ ಕಡಿಮೆ ಜಲಸಂಗ್ರಹಣ ಸಾಮರ್ಥ್ಯವುಳ್ಳ ಕದ್ರಾ ಜಲಾಶಯವು 32.50 ಮೀಟರ್ ಮಟ್ಟವನ್ನು ಶೀಘ್ರವೇ ತಲುಪುವ ಸಾಧ್ಯತೆ ಇರುತ್ತದೆ.

ಹೀಗಾಗಿ‌ ನದಿಯಂಚಿನ ಪ್ರದೇಶದ ಜನರು ಸೂಕ್ತ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ABOUT THE AUTHOR

...view details