ಕರ್ನಾಟಕ

karnataka

ETV Bharat / state

ಕದ್ರಾ ಜಲಾಶಯ ಭರ್ತಿ: 10.5 ಕ್ಯೂಸೆಕ್ ನೀರು ಹೊರಕ್ಕೆ - Kadra Dam

ಕಾಳಿ ನದಿ ವ್ಯಾಪ್ತಿಯ ಕಾರವಾರ, ಯಲ್ಲಾಪುರ, ಜೊಯಿಡಾ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರು ಹರಿದು ಬರತೊಡಗಿದೆ.

ಕದ್ರಾ ಜಲಾಶಯ ಭರ್ತಿ: 10.5 ಕ್ಯೂಸೆಕ್ ನೀರು ಹೊರಕ್ಕೆ

By

Published : Aug 4, 2019, 11:17 PM IST

ಕಾರವಾರ: ಇಲ್ಲಿನ ಕದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿಷದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಇಂದು(ಭಾನುವಾರ)ದಿಂದ ಐದು ಗೇಟ್​ ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ.

ಕದ್ರಾ ಜಲಾಶಯ ಭರ್ತಿ

10. 5 ಕ್ಯೂಸೆಕ್ ನೀರನ್ನು ಸಮುದ್ರಕ್ಕೆ ಬಿಡಲಾಗಿದೆ. ಕಾಳಿ ನದಿ ವ್ಯಾಪ್ತಿಯ ಕಾರವಾರ, ಯಲ್ಲಾಪುರ, ಜೊಯಿಡಾ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರು ಹರಿದು ಬರತೊಡಗಿದೆ. ಇದರಿಂದ ಜಲಾಶಯದ ಗರಿಷ್ಠ ಮಟ್ಟವು 34.50 ಮೀ. ಇದ್ದು, ಜಲಾಶಯ ಭರ್ತಿಯಾದ ಹಿನ್ನೆಲೆ 10,5 ಕ್ಯೂಸೆಕ್ ನೀರನ್ನು ಸಮುದ್ರಕ್ಕೆ ಬಿಡಲಾಗಿದೆ.

ಕದ್ರಾ ಜಲಾಶಯ ಭರ್ತಿ

ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನವರೆಗೂ ನೀರನ್ನು ಬಿಡಲಾಗುವುದು. ಅಲ್ಲದೆ ಜಲಾಶಯದಲ್ಲಿ ನಿರಂತರವಾಗಿ ವಿದ್ಯುತ್ ಉತ್ಪಾದನೆ ಕೂಡ ಮುಂದುವರಿದಿರುವುದಾಗಿ ಜಲಾಶಯದ ಕಾರ್ಯಪಾಲಕ‌ ಎಂಜಿನಿಯರ್ ಶಿವಪ್ರಸಾದ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details