ಶಿರಸಿ:ಟಿಬೆಟಿಯನ್ ಧರ್ಮಗುರು ದಲೈಲಾಮಾ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ಪ್ರವಾಸದಲ್ಲಿದ್ದಾರೆ. ಅವರನ್ನು ಜಿಲ್ಲಾ ಉಸ್ತುವಾರಿ ಸಚಿವೆ ತಮ್ಮ ಪತಿಯೊಂದಿಗೆ ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ.
ಸಚಿವೆ ಜೊಲ್ಲೆ ದಂಪತಿಯಿಂದ ದಲೈಲಾಮಾ ಭೇಟಿ.. - ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ದಲೈಲಾಮಾ ಭೇಟಿ
ಟಿಬೆಟಿಯನ್ ಧರ್ಮಗುರು ದಲೈಲಾಮಾ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ಪ್ರವಾಸದಲ್ಲಿದ್ದಾರೆ. ಅವರನ್ನು ಜಿಲ್ಲಾ ಉಸ್ತುವಾರಿ ಸಚಿವೆ ತಮ್ಮ ಪತಿಯೊಂದಿಗೆ ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ.

ದಲೈಲಾಮಾ ಭೇಟಿ ಮಾಡಿದ ಜೊಲ್ಲೆ ದಂಪತಿ...
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ತಮ್ಮ ಪತಿ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆಯವರೊಂದಿಗೆ ಮುಂಡಗೋಡ ನಿರಾಶ್ರಿತ ಟಿಬೆಟಿಯನ್ ಕಾಲೋನಿಗೆ ಭೇಟಿ ನೀಡಿ ಟಿಬೆಟಿಯನ್ ಧರ್ಮಗುರು ದಲೈಲಾಮಾರಿಗೆ ಶುಭ ಕೋರಿದ್ದಾರೆ.
ದಲೈಲಾಮಾ ಅವರನ್ನು ಭೇಟಿಯಾಗಿ, ಯೋಗ ಕ್ಷೇಮವನ್ನು ವಿಚಾರಿಸಿದ ದಂಪತಿ ಕೆಲ ಸಮಯ ಅವರೊಂದಿಗೆ ಕಳೆದರು. ಈ ಸಂದರ್ಭದಲ್ಲಿ ಮಾತಾಡಿದ ದಲೈಲಾಮಾ, ಭಾರತಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ಕೊಂಡಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.