ಕಾರವಾರ : ನಗರದ ದಿವೇಕರ ಮಹಾವಿದ್ಯಾಲಯದಲ್ಲಿ ಭಾನುವಾರ ಉದ್ಯೋಗ ಮೇಳ ನಡೆಯಿತು. ಮೇಳಕ್ಕೆ ಸಾವಿರಾರು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಸುಮಾರು 36ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.
ಕೆನರಾ ವೆಲ್‌ಫೇರ್ ಟ್ರಸ್ಟ್ ಹಾಗೂ ಮೆರಿಟ್ಯುಡ್ ಸಂಸ್ಥೆಯ ಸಹಯೋಗದಲ್ಲಿ ಉದ್ಯೋಗ ಮೇಳ ಹಮ್ಮಿಕ್ಕೊಳ್ಳಲಾಗಿತ್ತು. ಮೇಳಕ್ಕೆ ಆಯೋಜರ ನಿರೀಕ್ಷೆ ಮೀರಿ ಜಿಲ್ಲೆ ಹಾಗು ಹೊರ ಜಿಲ್ಲೆಗಳಿಂದ ಸುಮಾರು 2,600ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಈ ಪೈಕಿ 2,300 ಅಭ್ಯರ್ಥಿಗಳು ಆನ್ಲೈನ್ನಲ್ಲಿ ನೋಂದಣಿ ಮಾಡಿದರೆ, ಉಳಿದ ಅಭ್ಯರ್ಥಿಗಳು ನೇರವಾಗಿ ಉದ್ಯೋಗ ಮೇಳದಲ್ಲಿಯೇ ನೋಂದಣಿ ಮಾಡಿಸಿದ್ದರು. ಐಸಿಐಸಿಐ ಬ್ಯಾಂಕ್, ಮುತ್ತೂಟ್ ಫೈನಾನ್ಸ್, ಮಹೀಂದ್ರಾ ಸೇರಿದಂತೆ 36ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸತೀಶ್ ಸೈಲ್, ಉದ್ಯೋಗ ಮೇಳಗಳು ವಿದ್ಯಾವಂತರ ಬಾಳಿಗೆ ಆಶಾಕಿರಣಗಳಿದ್ಧಂತೆ. ಇದರಿಂದ ಹಲವಾರು ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾರವಾರದಲ್ಲಿ ಇಂತಹ ಉದ್ಯೋಗ ಮೇಳದ ಅವಶ್ಯಕತೆ ಇತ್ತು. ಈ ಉದ್ಯೋಗ ಮೇಳದ ಮೂಲಕ ಕಾರವಾರ ಸೇರಿದಂತೆ ಜಿಲ್ಲೆಯ ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಲಭಿಸಲಿದೆ. ಜತೆಗೆ ಅವರ ಜೀವನ ಕಂಡುಕೊಳ್ಳುತ್ತಾರೆ ಎಂದರು.