ಕರ್ನಾಟಕ

karnataka

ETV Bharat / state

ಕಾರವಾರ: ಮುಂಜಾಗ್ರತೆ ವಹಿಸದೆ 250 ಕೆಜಿ ಜಿಲೆಟಿನ್ ಸಾಗಣೆ, ಜೆಸಿಬಿ ವಶಕ್ಕೆ - JCB AND JILETIN OCCUPIED BY POLICE IN KARAWARA

ಯಾವುದೇ ಮುಂಜಾಗ್ರತೆ ವಹಿಸದೆ ಪ್ರತ್ಯೇಕ ವಾಹನದಲ್ಲಿ ಜಿಲೆಟಿನ್​ ಸಾಗಿಸುತ್ತಿದ್ದ ಕಾರಣ ಜೆಸಿಬಿ, ಜಿಲೆಟಿನ್ ಹಾಗು ಇತರ ಪರಿಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

jcb
ಜೆಸಿಬಿ

By

Published : Feb 1, 2022, 3:22 PM IST

Updated : Feb 1, 2022, 3:30 PM IST

ಕಾರವಾರ:ಜೆಸಿಬಿ ಮುಂಭಾಗದಲ್ಲಿ 250 ಕೆಜಿಗೂ ಅಧಿಕ ತೂಕದ ಜಿಲೆಟಿನ್ ಅನ್ನು ಅಜಾರೂಕತೆಯಿಂದ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಅಧಿಕಾರಿಗಳು ಜೆಸಿಬಿ ಸಹಿತ ಜಿಲೆಟಿನ್ ವಶಕ್ಕೆ ಪಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಜಿಲೆಟಿನ್

ತಾಲೂಕಿನ ಅರಗಾ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಅಗಲೀಕರಣಕ್ಕಾಗಿ ಬಂಡೆಗಳನ್ನು ಸ್ಫೋಟಿಸಲು ಜೆಸಿಬಿ ಮೂಲಕ ಸುಮಾರು 250 ಕೆಜಿಗೂ ಅಧಿಕ ಜಿಲೆಟಿನ್ ಸಾಗಿಸಲಾಗುತ್ತಿತ್ತು. ಅಜಾರೂಕತೆಯಿಂದ ಸಾಗಿಸುತ್ತಿರುವ ಬಗ್ಗೆ ತಿಳಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಯಾವುದೇ ಮುಂಜಾಗ್ರತೆ ವಹಿಸದೆ ಪ್ರತ್ಯೇಕ ವಾಹನದಲ್ಲಿ ಸಾಗಿಸಿದ ಕಾರಣ ಜೆಸಿಬಿ, ಜಿಲೆಟಿನ್ ಹಾಗು ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:Union budget 2022.. ಅರ್ಥವ್ಯವಸ್ಥೆ ಸರಿಪಡಿಸುವ ಬಜೆಟ್.. ಸಚಿವ ಗೋವಿಂದ ಕಾರಜೋಳ

Last Updated : Feb 1, 2022, 3:30 PM IST

ABOUT THE AUTHOR

...view details