ಉತ್ತರಕನ್ನಡ :ಕೊರೊನಾ ನಿಯಂತ್ರಣದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಒಂದು ದಿನದ ಜನತಾ ಕರ್ಫ್ಯೂಗೆ ಭಾನುವಾರ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅದರಂತೆ ಭಟ್ಕಳ ತಾಲೂಕು ಸಹ ಸಂಪೂರ್ಣ ಸ್ತಬ್ಧಗೊಂಡಿವೆ.
ಭಟ್ಕಳ ಜನತಾ ಕರ್ಫ್ಯೂ.. ಪೊಲೀಸರ ಹೊಟ್ಟೆ ತಣ್ಣಗಾಗಿಸಿದ ಸಹೃದಯಿ ಮುಸ್ಲಿಮರು!
ಬಿಸಿಲಿನಲ್ಲಿ ಬಸವಳಿದಿದ್ದ ಪೊಲೀಸರಿಗೆ ಮುಸ್ಲಿಂ ಬಾಂಧವರೇ ತಂಪು ಪಾನೀಯಗಳನ್ನ ನೀಡಿ ಮಾನವೀಯತೆ ಮೆರೆದಿದ್ದಾರೆ. ಝಳದಿಂದಾಗಿ ಸುಸ್ತಾದವರಂತೆ ಕಾಣ್ತಿದ್ದ ಪೊಲೀಸರು ಕೋಲ್ಡ್‌ಡ್ರಿಂಕ್ಸ್ ಕುಡಿದು ಹೊಟ್ಟೆ ತಣ್ಣಗಾಗಿಸಿಕೊಂಡಿದ್ದಾರೆ. ಅಲ್ಲದೇ ಮುಸ್ಲಿಂ ಸಮುದಾಯದವರ ನಡೆಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.
ಜನತಾ ಕರ್ಫ್ಯೂಗೆ ಭಟ್ಕಳ ಜನತೆ ಬೆಂಬಲ
ಜನತಾ ಕರ್ಫ್ಯೂವನ್ನು ತಾಲೂಕಿನ ಸಾರ್ವಜನಿಕರು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂಜಾನೆಯಿಂದಲೇ ಯಾರೂ ಮನೆಗಳಿಂದ ಹೊರಗೆ ಬರದೆ ಮನೆಯಲ್ಲೇ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಜನತಾ ಕರ್ಫ್ಯೂನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಮುಸ್ಲಿಂ ಸಮುದಾಯದ ಬಂಧುಗಳು ತಂಪು ಪಾನೀಯ ನೀಡಿ ಮಾನವೀಯತೆ ಮೆರೆದಿದ್ದಾರೆ.