ಉತ್ತರ ಕನ್ನಡ (ಭಟ್ಕಳ) : ಮಹಾಮಾರಿ ಕೊರೊನಾ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಜನತಾ ಕರ್ಪ್ಯೂ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಹೆಲಿಕಾಪ್ಟರ್ ಮೂಲಕ ಮುದ್ದು ಸಿಂಪಡನೆ ಮಾಡುತ್ತಾರೆ ಎಂದು ಹರಡಿದ ವದಂತಿಗಳನ್ನು ನಂಬಿ ಜನರು ರಾತ್ರಿ ತಮ್ಮ ಮನೆಯ ಬಾವಿಗಳಿಗೆ ಬೆಡ್ ಶೀಟ್, ತಾಡಪತ್ರಗಳನ್ನು ಮುಚ್ಚಿದ್ದಾರೆ.
ಮದ್ದು ಸಿಂಪಡಿಸ್ತಾರೆಂಬ ವಂದತಿ ನಂಬಿ ಬಾವಿಗಳನ್ನು ಮುಚ್ಚಿದ್ರು ಜನ! - Janta Curfew effect in Karnataka
ಹೆಲಿಕಾಪ್ಟರ್ ಮೂಲಕ ಮದ್ದು ಸಿಂಪಡನೆ ಮಾಡುತ್ತಾರೆ ಎಂದು ಜನರು ತಪ್ಪು ಭಾವಿಸಿ ತಾಲೂಕಿನ ಸುತ್ತಮುತ್ತಲು ರಾತ್ರಿ ತಮ್ಮ ಮನೆಯ ಬಾವಿಗಳಿಗೆ ಬೆಡ್ ಶೀಟ್, ತಾಡಪತ್ರಗಳನ್ನು ಮುಚ್ಚಿದ್ದಾರೆ.
ಮದ್ದು ಸಿಂಪಡಿಸುತ್ತಾರೆ ತಪ್ಪು ಭಾವಿಸಿ ಬಾವಿಗಳನ್ನು ಮುಚ್ಚಿದ ಜನ
ಹೆಲಿಕಾಪ್ಟರ್ ಮೂಲಕ ಕೊರೊನಾ ವೈರಸ್ಗೆ ಮದ್ದು ಸಿಂಪಡನೆ ಮಾಡಲಾಗುತ್ತದೆ ಎಂದು ನಿನ್ನೆ ರಾತ್ರಿ ತಾಲೂಕಿನ ವಿವಿಧೆಡೆ ಸಾಮಾಜಿಕ ಜಾಲತಾಣಗಳ ಮೂಲಕ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರಿಂದ ಜನರು ತಮ್ಮ ಮನೆಗಳ ಬಾವಿಗಳನ್ನು ಮುಚ್ಚಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.