ಶಿರಸಿ: ಪ್ರಧಾನಿ ಮೋದಿ ಅವರ ಜನತಾ ಕರ್ಫ್ಯೂಗೆ ಶಿರಸಿಯಲ್ಲಿ ಭಾರಿ ಬೆಂಬಲ ದೊರೆತಿದ್ದು, ಭಾನುವಾರ ಬೆಳಗ್ಗೆ 7ರಿಂದ ಇಲ್ಲಿಯವರೆಗೂ ನಗರ ಪ್ರದೇಶ, ಪ್ರಮುಖ ಗ್ರಾಮೀಣ ಭಾಗಗಳು ಸಂಪೂರ್ಣ ಸ್ತಬ್ಧವಾಗಿವೆ.
ಬೆಳಗ್ಗೆಯಿಂದಲೇ ಸ್ವಯಂ ಪ್ರೇರಣೆಯಿಂದ ಗೃಹ ಬಂಧನಕ್ಕೆ ಒಳಗಾದ ಜನ - ಕೊರೊನಾ ವೈರಸ್ ಭೀತಿ
ಬೆಳಗ್ಗೆಯಿಂದಲೇ ಶಿರಸಿಯಲ್ಲಿ ಜನರು ಮನೆಗಳಿಂದ ಹೊರಬರದೇ ಸ್ವಯಂ ಪ್ರೇರಣೆಯಿಂದ ಗೃಹ ಬಂಧನಕ್ಕೊಳಗಾಗಿದ್ದಾರೆ. ಜನ ರಸ್ತೆಗಳಿಂದ ದೂರ ಉಳಿದಿದ್ದಾರೆ.
ಸಿರಸಿ ಬಂದ್
ಬೆಳಿಗ್ಗೆ 7ರಿಂದ ಆರಂಭವಾದ ಕರ್ಫ್ಯೂಗೆ ಜನರು ತಮ್ಮ ಸಹಕಾರ ನೀಡಿದ್ದು, ಅನಗತ್ಯವಾಗಿ ಯಾರೊಬ್ಬರು ಹೊರಬಾರದೆ ತಮ್ಮ ಮನೆಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ನಗರದಲ್ಲಿ ಬಂದ್ ಆಚರಿಸಿದ ಪರಿಣಾಮ ಜನತಾ ಕರ್ಫ್ಯೂ ಯಶಸ್ವಿಯಾಯಿತು.
ಜಿಲ್ಲೆಯಾದ್ಯಂತ ಬಸ್ ಸಂಚಾರ ರದ್ದುಪಡಿಸಲಾಗಿತ್ತು. ಬಸ್ ನಿಲ್ದಾಣ ಬಣಗುಡುತ್ತಿತ್ತು. ನಗರದ ಶಿವಾಜಿ ಚೌಕ, ರಾಘವೇಂದ್ರ ಸರ್ಕಲ್, ಅಶ್ವಿನಿ ಸರ್ಕಲ್, ಕಾಲೇಜು ರಸ್ತೆಗಳು ಸಂಪೂರ್ಣ ಬಂದ್ ಆಗಿದ್ದವು.