ಕಾರವಾರ: ಕೊರೊನಾ ಸಂಕಷ್ಟದ ಸಮಯದ ಹೈ ರಿಸ್ಕ್ ನಡುವೆಯೂ ಬಿಸಿಲನ್ನು ಲೆಕ್ಕಿಸದೇ ರಸ್ತೆಗಳಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಇಲ್ಲೊಂದು ಸಂಘಟನೆ ನೀರು ಬಿಸ್ಕತ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.
ಸುಡು ಬಿಸಿಲ ನಡುವ ಪೊಲೀಸರ ಕರ್ತ್ಯವ್ಯ : ನೀರು, ಬಿಸ್ಕತ್ ನೀಡಿ ಮಾನವೀಯತೆಯ 'ಜನಸ್ಪಂದನ' - ನೀರು, ಬಿಸ್ಕತ್ ನೀಡಿ ಮಾನವಿಯತೆ ಮೆರೆದ ಸಂಘಟನೆ
ನಗರದ ಜನಸ್ಪಂದನಾ ಸೇವಾ ಸಂಘದ ಸದಸ್ಯರು ವಿವಿಧ ಮುಖ್ಯ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಬಿಸ್ಕತ್ತು ಹಾಗೂ ನೀರಿನ ಬಾಟಲ್ ತಂಪು ಪಾನಿಯಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ..
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರಿಂದ ಕೊರೊನಾ ಕರ್ಪ್ಯೂ ಜಾರಿ ಮಾಡಲಾಗಿದೆ. ಇದರಿಂದ ಪೊಲೀಸ್ ಸಿಬ್ಬಂದಿ ಬಿಸಿಲ ಧಗೆ ಲೆಕ್ಕಿಸದೇ ದಿನವಿಡಿ ಅನಾವಶ್ಯಕವಾಗಿ ಓಡಾಡುವವರ ಮೇಲೆ ಹದ್ದಿನ ಕಣ್ಣಿಟ್ಟು ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಬಾಯಾರಿಕೆಯಾದರು ನೀರು ಬೇಕಾದಲ್ಲಿ ಅಂಗಡಿ ಓಪನ್ ಇರುವುದಿಲ್ಲ. ಇದನ್ನು ಅರಿತ ನಗರದ ಜನಸ್ಪಂದನಾ ಸೇವಾ ಸಂಘದ ಸದಸ್ಯರು ವಿವಿಧ ಮುಖ್ಯ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಬಿಸ್ಕತ್ತು ಹಾಗೂ ನೀರಿನ ಬಾಟಲ್, ತಂಪು ಪಾನಿಯಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.