ಕರ್ನಾಟಕ

karnataka

ETV Bharat / state

ಮುಂಡಗೋಡಿನ ಸಹದೇವ ನಡಗೇರಗೆ ರಾಜ್ಯ ಪ್ರಶಸ್ತಿ: ಗಣ್ಯರಿಂದ ಅಭಿನಂದನೆ - ಲಮಾಣಿ ಪದ ರಚನೆಕಾರ

ಲಮಾಣಿ ಪದ ರಚನೆಕಾರರಾಗಿರುವ ಮುಂಡಗೋಡಿನ ಸಹದೇವ ನಡಗೇರ ಅವರಿಗೆ ರಾಜ್ಯ ಜಾನಪದ ಸಾಹಿತ್ಯ ಪ್ರಶಸ್ತಿ ಲಭಿಸಿದ್ದು, ಜಾನಪದ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿರುವ ಸಹದೇವ ಅವರಿಗೆ ಹಲವಾರು ಗಣ್ಯರು ಸೇರಿದಂತೆ ಸಾಮಾನ್ಯ ಜನರು ಸಹ ಅಭಿನಂದನೆ ಸಲ್ಲಿಸಿದ್ದಾರೆ.

Sahadeva Nadagera
ಸಹದೇವ ನಡಗೇರ

By

Published : Jan 5, 2021, 4:54 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಮಾಣಿ ಪದ ರಚನೆಕಾರ ಸಹದೇವ ನಡಗೇರ ಅವರಿಗೆ 2020ನೇ ಸಾಲಿನ ಕರ್ನಾಟಕ ರಾಜ್ಯ ಜಾನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಸಹದೇವ ನಡಗೇರ ಅವರು ಹಲವಾರು ಲಾವಣಿ ಹಾಗೂ ಗೀಗಿ ಪದಗಳನ್ನು ರಚಿಸುವುದರ ಮೂಲಕವಾಗಿ ಜಾನಪದ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಓರ್ವ ಕೃಷಿಕರಾಗಿ ಸಾಧನೆ ಮಾಡುವುದರ ಜೊತೆಯಲ್ಲಿ ಸಮಾಜ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರೊಂದಿಗೆ ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಸದಾ ಕಾಲವೂ ಜಾನಪದ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿರುವ ನಡಗೇರ ಅವರಿಗೆ ಪ್ರಶಸ್ತಿ ಬಂದಿರುವುದಕ್ಕೆ ಕಾರ್ಮಿಕ ಮತ್ತು ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸೇರಿದಂತೆ ಇನ್ನಿತರ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details