ಕಾರವಾರ: ಪ್ರವಾಹದಲ್ಲಿ ಕಳೆದುಕೊಂಡ ಮನೆ ಅತಿಕ್ರಮಣ ಪ್ರದೇಶದಲ್ಲಿದ್ದರೂ ಆ ಸಂತ್ರಸ್ತರನ್ನು ಪರಿಹಾರಕ್ಕೆ ಪರಿಗಣಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.
ಪ್ರವಾಹದಲ್ಲಿ ಕಳೆದುಕೊಂಡ ಮನೆ ಅತಿಕ್ರಮಣವಾಗಿದ್ದರೂ ಪರಿಹಾರ: ಸಚಿವ ಶೆಟ್ಟರ್ - ಪ್ರವಾಹದಲ್ಲಿ ಕಳೆದುಕೊಂಡ ಮನೆ ಅತಿಕ್ರಮಣವಾಗಿದ್ದರು ಪರಿಹಾರ
ಪ್ರವಾಹದಲ್ಲಿ ಕಳೆದುಕೊಂಡ ಮನೆ ಅತಿಕ್ರಮಣ ಪ್ರದೇಶದಲ್ಲಿದ್ದರೂ ಅವರನ್ನು ಪರಿಹಾರಕ್ಕೆ ಪರಿಗಣಿಸಲಾಗುವುದು ಎಂದು ಕಾರವಾರದಲ್ಲಿ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.
ಅಂಕೋಲಾ, ಕುಮಟಾ ಬಳಿಕ ಕಾರವಾರದ ಕದ್ರಾ ಮಲ್ಲಾಪುರಕ್ಕೆ ತೆರಳಿದ್ದ ಅವರು, ಪ್ರವಾಹದಿಂದ ಮನೆ ಅಂಗಡಿ, ಜಮೀನುಗಳನ್ನು ಕಳೆದುಕೊಂಡು ಅತಂತ್ರವಾಗಿರುವ ಜನರ ಸಮಸ್ಯೆ ಆಲಿಸಿದರು. ಈ ವೇಳೆ ಮಹಿಳೆವೋರ್ವಳು ತಮ್ಮ ಈ ಸ್ಥಿತಿಗೆ ಕೆಪಿಸಿ ಮುನ್ಸೂಚನೆ ನೀಡದೆ ಒಮ್ಮೆಲೇ ನೀರು ಬಿಟ್ಟಿದ್ದೇ ಕಾರಣವೆಂದು ಕಣ್ಣೀರು ಹಾಕಿದ್ರು. ಈ ವೇಳೆ ಸಂತ್ರಸ್ತೆವೋರ್ವಳನ್ನು ಸಮಾಧಾನಪಡಿಸಿದ ಸಚಿವ ಶೆಟ್ಟರ್, ಸೂಕ್ತ ಪರಿಹಾರ ಹಾಗೂ ಮನೆ ಕಟ್ಟಿಸಿಕೊಡುವ ಬಗ್ಗೆ ಭರವಸೆ ನೀಡಿದ್ರು.
ಇನ್ನು ನೆರೆಯಿಂದಾಗಿ ಸಾಕಷ್ಟು ಜನರು ಮನೆ ಜಮೀನುಗಳನ್ನು ಕಳೆದುಕೊಂಡಿದ್ದು, ಅಂತವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮನೆ ಬಿದ್ದವರಿಗೆ ಪುನಃ ಕಟ್ಟಿಕೊಳ್ಳಲು 5 ಲಕ್ಷ ರೂ. ನೀಡಿದ್ದೇವೆ. ಇನ್ನು ಕೆಪಿಸಿಎಲ್ ನಲ್ಲಿ ಖಾಲಿ ಇರುವ ಕ್ವಾಟ್ರಸ್ಗಳನ್ನು ನಿರಾಶ್ರಿತರಿಗೆ ನೀಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಸಂತ್ರಸ್ತರು ದೂರಿದರು. ಖಾಲಿ ಇರುವ ಕ್ವಾಟ್ರಸ್ಗಳನ್ನು ಮೂರ್ನಾಲ್ಕು ತಿಂಗಳು ಮನೆ ಕಟ್ಟಿಕೊಳ್ಳುವವರೆಗೆ ಕೊಡಲು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಚಿವ ಜಗದೀಶ್ ಶೆಟ್ಟರ್ ಇದೇ ವೇಳೆ ಸೂಚಿಸಿದ್ರು.